ಸುಳ್ಯ: ಸುಳ್ಯ ನಗರ ಯೋಜನಾ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ದೊರೆತಿರುತ್ತದೆ. ಈ ಪ್ರಾಧಿಕಾರದಿಂದ ಮಹಾಯೋಜನೆಯಲ್ಲಿ ಪರಿಷ್ಕರಣೆಯೊಂದಿಗೆ ಅನುಮೋದನೆ ನೀಡುವ ಬಗ್ಗೆ ಇಲಾಖಾ ಅಧಿಕಾರಿಗಳ, ಉಸ್ತುವಾರಿ ಸಚಿವರ, ಇಲಾಖಾ ಸಚಿವರ ಸಭೆ ನಡೆಸಿ ಪರಿಹಾರ
ಒದಗಿಸಿ ಕೊಡಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಶಹೀದ್ ಪಾರೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಸುಳ್ಯದ ಪಕ್ಷದ ಮುಖಂಡರುಗಳನ್ನು ಈ ಸಭೆಗೆ ಆಹ್ವಾನಿಸುವಂತೆಯೂ ವಿನಂತಿಸಲಾಗಿದೆ. ಈಗಾಗಲೇ ಮೂಡಬಿದಿರೆ ಇನ್ನಿತರ ಕಡೆಗಳಲ್ಲಿ ಅನುಷ್ಠಾನ ಮಾಡಿದಂತೆ ಸುಳ್ಯದಲ್ಲೂ ಅನುಷ್ಠಾನ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.









