ಸುಳ್ಯ:ಅತ್ಯಾಧುನಿಕ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಆಸ್ಪತ್ರೆ ‘ಮೆಡ್ ಲ್ಯಾಂಡ್’ ಸ್ಪೆಷಾಲಿಟಿ ಅಸ್ಪತ್ರೆ ನಾಳೆ (ಸೆ.21ರಂದು) ಲೋಕಾರ್ಪಣೆಗೊಳ್ಳಲಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ‘ಮೆಡ್ ಲ್ಯಾಂಡ್’ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಮೆಡ್ಲ್ಯಾಂಡ್ ಆಸ್ಪತ್ರೆಯ ಆಡಳಿತ ಮಂಡಳಿಯ ಕಾನೂನು ಸಲಹೆಗಾರರಾದ ಮೂಸಾ ಕುಂಞಿ ಪೈಂಬೆಚ್ಚಾಲ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರ ಆರೋಗ್ಯದ
ಹಿತದೃಷ್ಟಿಯಿಂದ 24 ಗಂಟೆಯೂ ಕಾರ್ಯಾಚರಿಸುವ ಸುಸಜ್ಜಿತ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಜನರಲ್ ಮೆಡಿಸಿನ್, ಮಕ್ಕಳ, ಸ್ತ್ರೀರೋಗ, ಹೃದಯ ಸಂಬಂಧಿತ ಸೇರಿ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸುಸಜ್ಜಿತ ಡಯಾಲಿಸಿಸ್ ಸೇರಿದಂತೆ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ ಎಂದು ಅವರು ಹೇಳಿದರು.

ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಒ.ಟಿ. ಕಾಂಪ್ಲೆಕ್ಸ್ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಐವನ್ ಡಿ’ಸೋಜಾ, ಕಾಸರಗೋಡು ದೇಲಂಪಾಡಿ ಜಿ.ಪಂ. ಸದಸ್ಯ ಮುಹಮ್ಮದ್ ಶಫೀಕ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಣ್ಣೂರು ಸ್ಕೈ ಹಾಸ್ಪಿಟಲ್ ಸಮೂಹದ ಅಧ್ಯಕ್ಷ ಡಾ. ವಾಸುದೇವನ್ ಟಿ.ಪಿ., ಬೆಂಗಳೂರು ಮಿಲಾಪ್ ಚಂದ್ ಜೈನ್, ಆರ್ಯಾಪು ಜಿಲ್ಲಾ ಅಧ್ಯಕ್ಷೆ ಗೀತಾ ಮತ್ತು ಇತರರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ 100 ಬೆಡ್ ಗಳನ್ನು ಒಳಗೊಂಡಿರುವ ಆಸ್ಪತ್ರೆಯಾಗಿದ್ದು ಇಲ್ಲಿ 24 ಗಂಟೆಗಳ ತುರ್ತು ಚಿಕಿತ್ಸೆ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ, ಒಂದೇ ಸೂರಿನಡಿ ತಜ್ಞ ವೈದ್ಯರಿಂದ ಸಮಗ್ರ ವೈದ್ಯಕೀಯ ಸೇವೆ ಸಿಗಲಿದೆ. ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು
ಅಳವಡಿಸಿಕೊಳ್ಳಲಾಗಿದ್ದು, ಗುಣಮಟ್ಟದ ಸೇವೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಮೂಸಾ ಕುಂಞಿ ವಿವರಿಸಿದರು.
ಹೃದಯ, ಕಿಡ್ನಿ, ಲಿವರ್ಗೆ ಸಂಬಂಧಿಸಿದ ಎಲ್ಲಾ ತರಹದ ರಕ್ತ ಪರೀಕ್ಷೆಗಳು, 24 ಗಂಟೆ ಸೇವೆಯ ಔಷಧಾಲಯ,ಎಸಿ ಆಂಬುಲೆನ್ಸ್ ಸೇವೆ, ಕಂಪ್ಯೂಟರೀಕೃತ ಪ್ರಯೋಗಾಲಯ, ಉಪಹಾರ ಗೃಹ, ಜನರಲ್ ವಾರ್ಡ್, ಸ್ಪೆಷಲ್ ರೂಮ್,ಸಂದರ್ಶಕ ತಜ್ಞ ವೈದ್ಯರ ಸೇವೆ,
ನುರಿತ ಸಿಬ್ಬಂದಿಗಳಿಂದ ಸದಾ ಸೇವೆ, ಅಲ್ಟ್ರಾ ಸೌಂಡ್ ಸ್ಕ್ಯಾನ್, ಸಿಟಿ ಸ್ಕ್ಯಾನ್, ಇಸಿಜಿ, ಡಯಾಲಿಸಿಸ್, ಡಿಜಿಟಲ್ ಎಕ್ಸರೇ, ಎಮರ್ಜೆನ್ಸಿ ಸರ್ವಿಸಸ್,ಐಸಿಯು ಸರ್ವಿಸಸ್, 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, 24 ಗಂಟೆ ತುರ್ತು ಚಿಕಿತ್ಸೆ
ಒಂದೇ ಸೂರಿನಡಿ ತಜ್ಞ ವೈದ್ಯರಿಂದ ಸಮಗ್ರ ವೈದ್ಯಕೀಯ ಸೇವೆ
ವೈದ್ಯರು, ಸಿಬ್ಬಂದಿಯ ಉತ್ತಮ ಸೇವೆ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಅಬೂಬಕ್ಕರ್ ಅಡ್ಕಾರ್, ಉದ್ಯಮಿ ಆರಿಫ್ ತೆಕ್ಕಿಲ್, ಶಾಹೀದ್ ಪಾರೆ ಉಪಸ್ಥಿತರಿದ್ದರು.





