ಏನೆಕಲ್ಲು: ರೈತ ಯುವಕ ಮಂಡಲ ಏನೆಕಲ್ ಇದರ ಆಶ್ರಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಹಾಗೂ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದರ ಸಹಯೋಗದಲ್ಲಿ ಏನಕಲ್ಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕೆವಿಜಿ ಮಡಿಕಲ್ ಕಾಲೇಜಿನ ಡಾ.ಗೀತಾ ದೊಪ್ಪಾ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ರೈತ ಯುವಕ ಮಂಡಲದ ಅಧ್ಯಕ್ಷ ಮನುದೇವ್ ಪರಮಲೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನುಗ್ರಹ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯರ್, ಶ
ವಿನಯ್ ಬೆದ್ರುಪಣೆ, ಮೋಹನ್ ಕೋಟಿಗೌಡನಮನೆ, ರಾಮಕೃಷ್ಣ ಮಲ್ಲಾರ, ಶಿವರಾಮ್ ನೆಕ್ರಾಜೆ, ಚಂದ್ರಿಕಾ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.ಸಾತ್ವಿಕ್ ಚಿದ್ಗಲ್ ಸ್ವಾಗತಿಸಿದರು. ವಿಜಯ್ ಕುಮಾರ್ ಅಮೈ ನಿರೂಪಿಸಿದರು. ರಕ್ಷಿತ್ ಪರಮಲೆ ವಂದಿಸಿದರು.