ಸುಳ್ಯ: ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ 2023-24ನೇ ಸಾಲಿನ ಪ್ರಥಮ ವರ್ಷದ ಎಂ.ಬಿ.ಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “ಅಧ್ವಯ” ಮತ್ತು ವಿದ್ಯಾರ್ಥಿ ಸಂಘ ಮಾನಸ ಉದ್ಘಾಟಣಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಗೌರವ ಅತಿಥಿಗಳಾಗಿದ್ದ ವಿಟಿಯುನ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ ಉದ್ಘಾಟಿಸಿ ಮಾತನಾಡಿ ‘ಭವಿಷ್ಯದಲ್ಲಿ ಜ್ಞಾನದ ಮೌಲ್ಯವು
ವೃದ್ಧಿಯಾಗುವುದರ ಜೊತೆಯಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ದೀಪಕ್ ಕುತ್ತಮೊಟ್ಟೆ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ವಹಿಸಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ. ಶ್ರೀಧರ ಕೆ. ಹಾಗೂ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಾನಂದ ಎ. ವಿದ್ಯಾರ್ಥಿ ಸಲಹೆಗಾರರಾದ ಪ್ರೊ. ಇಮ್ಯಾಕ್ಯುಲೇಟ್ ಮೇರಿ, ಕೋಶಾಧಿಕಾರಿ ಪ್ರೊ. ಮನೋಹರ ಎ.ಎನ್. ಸಂಘದ ನೂತನ ಉಪಾಧ್ಯಕ್ಷೆ ಗಾಯತ್ರಿ ನಂಬಿಯಾರ್ ಮತ್ತು ಕಾರ್ಯದರ್ಶಿ ಯಶಸ್ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಮತ್ತು ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಗಾಯತ್ರಿ ನಂಬಿಯಾರ್ ಸ್ವಾಗತಿಸಿ, ಕಾರ್ಯದರ್ಶಿ ಯಶಸ್ ವಾರ್ಷಿಕ ವರದಿಯನ್ನು ಮಂಡಿಸಿದರು. ಹಾಗು ಚೈತನ್ಯ ವಂದಿಸಿದರು. ಶಿಫಾ ಎಂ.ಎ. ಮತ್ತು ಶಿಫಾ ಎ. ಕಾರ್ಯಕ್ರಮವನ್ನು ನಿರೂಪಿಸಿದರು.














