ಸುಳ್ಯ:ವಿಜಯಕುಮಾರ್ ಮಯೂರಿ ನೇತೃತ್ವದ ಮಯೂರಿ ರೆಸ್ಟೋರೆಂಟ್ನ ಸಹ ಸಂಸ್ಥೆ ಮಯೂರಿ ಟಾಪ್ ಹೌಸ್ ರೆಸ್ಟ್ರೋ’ ಡಿ.25 ರಂದು ಶುಭಾರಂಭಗೊಂಡಿತು.ಕುರುಂಜಿಭಾಗ್ನ ಕೆವಿಜಿ ಸರ್ಕಲ್ನ ಮಯೂರಿ ರೆಸ್ಟೋರೆಂಟ್ನ ಮೇಲ್ಭಾಗದಲ್ಲಿ ಆರಂಭಗೊಂಡ ಮಯೂರಿ ಟಾಪ್ ಹೌಸ್ ರೆಸ್ಟ್ರೋವನ್ನು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ
ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಶುಭ ಹಾರೈಸಿದರು. ನ್ಯಾಯವಾದಿ ನಾರಾಯಣ ಕೆ ಸುಳ್ಯ,
ನಂದಾ ಸ್ಟೋರ್ನ ಮಾಲಕರಾದ ಸದಾನಂದ ಕೆ ಸಿ, ಭಾರತ್ ಮೆಡಿಕಲ್ಸ್ನ ಮಾಲಕರಾದ ಪ್ರಭಾಕರ ಬಿ ಪಿ ಮಯೂರಿ, ಝೀ ಕನ್ನಡ ವಾಹಿನಿಯ ಸಚಿನ್ ಪ್ರಕಾಶ್,ಝೀ ಕನ್ನಡ ಸರಿಗಮಪ ಖ್ಯಾತಿಯ ಸುಹಾನಾ ಸಯ್ಯದ್, ಚಲನಚಿತ್ರ ನಟ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕಾಪಿನಡ್ಕ ಭಾಗವಹಿಸಿದ್ದರು.ನಟ ತುಷಾರ್ ಗೌಡ ಸ್ವಾಗತಿಸಿ,
ಮಯೂರಿ ರೆಸ್ಟೋರೆಂಟ್ನ ಮಾಲಕರಾದ ವಿಜಯ್ ಕುಮಾರ್ ಮಯೂರಿ ವಂದಿಸಿದರು.ರೂಪ ವಿಜಯ ಕುಮಾರ್ ಉಪಸ್ಥಿತರಿದ್ದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಮಯೂರಿ ರೆಸ್ಟಾರೆಂಟ್ನ ಮೇಲ್ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಯೂರಿ ಟಾಪ್ ಹೌಸ್ ರೆಸ್ಟ್ರೋ ಆಧುನಿಕತೆಯ ಸ್ಪರ್ಶದೊಂದಿಗೆ ಆಕರ್ಷಕವಾಗಿ ರೂಪಿಸಲಾಗಿದ್ದು ಆರಾಮದಾಯಕ ಆಸನದ ವ್ಯವಸ್ಥೆ ಯೊಂದಿಗೆ ಗೆಳೆಯರ ಜತೆ ಫ್ಯಾಮಿಲಿಯೊಂದಿಗೆ ಕುಳಿತು ಶುಚಿ ರುಚಿಯಾದ ಆಹಾರ ಖಾದ್ಯಗಳನ್ನು ಸವಿಯಲು ಹಾಗೂ ಹುಟ್ಟು ಹಬ್ಬ ಮುಂತಾದ ಪಾರ್ಟಿ ಗಳನ್ನು ಮಾಡುವುದಕ್ಕೆ ಬೇಕಾದ ಎಲ್ಲಾ
ವ್ಯವಸ್ಥೆಗಳೊಂದಿಗೆ ಈಗಾಗಲೇ ರೂಫ್ ಗಾರ್ಡನ್ ಸಿದ್ಧಗೊಂಡಿದೆ.ಗೆಳೆಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಬಿಗ್ ಬಾಸ್ ಲೋಗೋ, ಕಂಬಳದ ಕೋಣಗಳು ಸೆಲ್ಫಿ ಪಾಯಿಂಟ್ ಹಾಗೂ ಸುಂದರವಾದ ವೀವ್ ಪಾಯಿಂಟ್ ಹಾಗೂ ಕ್ರಿಕೆಟ್ ಪಂದ್ಯಾಟ ಹಾಗೂ ಚಲನಚಿತ್ರ ,ಧಾರವಾಹಿ ವೀಕ್ಷಿಸಲು ಬೃಹತ್ ಗಾತ್ರದ ಪರದೆ ಅಳವಡಿಸಲಾಗಿದೆ.