ಸುಳ್ಯ: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ ನಡೆಯಿತುಮ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ ” ವಿದ್ಯಾರ್ಥಿಗಳು ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಬಹು
ಭಾಷೆಗಳನ್ನು ಕಲಿಯುವುದರ ಜೊತೆಗೆ ಮಾತೃಭಾಷೆಯನ್ನು ಬೆಳೆಸಬೇಕು. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ದೇವಿಪ್ರಸಾದ ಜಿಸಿ ಮಾತನಾಡಿ “ಭಾರತದಲ್ಲಿ ಬಹು ಸಂಸ್ಕೃತಿ ಆಚಾರ ವಿಚಾರ ವೈಶಿಷ್ಟ್ಯಗಳ ಜೊತೆಗೆ ಬಹು ಭಾಷೆಗಳು ಅಸ್ತಿತ್ವದಲ್ಲಿವೆ. ಅನ್ಯ ಭಾಷೆಗಳನ್ನು ಗೌರವಿಸಿ, ನಮ್ಮ ಭಾಷೆಯಲ್ಲಿ ಮಾತನಾಡುವುದರ ಮೂಲಕ ಮಾತೃಭಾಷೆಯನ್ನು ಉಳಿಸಬೇಕು. ಮಾತೃಭಾಷೆ ಎಂದರೆ ಅದು ತಾಯಿ ಕಲಿಸಿದ ಭಾಷೆಯಾಗಿದ್ದು ಪ್ರತಿಯೊಬ್ಬನ ಹೃದಯದ ಭಾಷೆಯಾಗಲಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.