ಸುಳ್ಯ:ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳ ವತಿಯಿಂದ ಚಾವಡಿ ಸಭೆಗಳನ್ನು ನಡೆಸಲಾಗುತ್ತಿದೆ. ಸುಳ್ಯ ನಗರದ ವಿವಿಧ ಬೂತ್ಗಳಲ್ಲಿ ನಡೆದ ಚಾವಡಿ ಸಭೆಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕುಂತೂರು ಭಾಗವಹಿಸಿ ಮತದಾನದ ಬಗ್ಗೆ
ಜಾಗೃತಿ ಮೂಡಿಸಿದರು. ಸುಳ್ಯ ನಗರದ ಕಾಯರ್ತೋಡಿ, ಬೀರಮಂಗಲಗಳಲ್ಲಿ ಚಾವಡಿ ಸಭೆ ನಡೆಯಿತು. ಪರಿವಾರ ಸಂಘಟನೆಗಳ ಸುಳ್ಯ ಮಂಡಲ ಸಂಯೋಜಕ ಡಾ.ಮನೋಜ್, ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ ಮತ್ತಿತರರು ಭಾಗವಹಿಸಿದ್ದರು.
ಎಲ್ಲರೂ ಮತದಾನ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಬೂತ್ಗಳಲ್ಲಿ ಚಾವಡಿ ಸಭೆಗಳನ್ನು ನಡೆಸಲಾಗುತಿದೆ. ಸಭೆಗಳಲ್ಲಿ ಪ್ರಮುಖರು ಭಾಗವಹಿಸಿ ಮತದಾನ ಜಾಗೃತಿ ಮೂಡಿಸಲಿದ್ದಾರೆ. ಒಂದು ಬೂತ್ನಲ್ಲಿ ಕನಿಷ್ಠ 5 ಚಾವಡಿ ಸಭೆಗಳನ್ನು ನಡೆಸುವ ಮೂಲಕ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ ತಿಳಿಸಿದ್ದಾರೆ.