ಮಂಗಳೂರು: ಇದೇ ಏ.26 ರಂದು ನಡೆಯುವ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುವಂತೆ ಚುನಾವಣಾ ಆಯೋಗ ನೀಡಿರುವ ಸಲಹೆಯು ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ದಕ್ಣಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳೂರಿನ ಪಣಂಬೂರ್ ಬೀಚ್ ನಲ್ಲಿ ಮತದಾನ ಜಾಗೃತಿ ಕುರಿತು ಆಯೋಜಿಸಿದ್ದ
ಪಾರಾಸೈಲಿಂಗ್, ಜಟ್ಸ್ಕೀರೈಡ್, ಪ್ಯಾರಾಸ್ಲೈಡಿಂಗ್ ಡೀಪಿಂಗ್ ಬೋಟ್ ರೈಡ್ ಸೇರಿ ನಾನಾ ರೈಡ್ ,ಅನ್ನು ಸ್ವತಃ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ತಂಡದ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಕಡಲ ಕಿನಾರೆಯಲ್ಲಿ ಮತದಾನದ ಫಲಕ ಹಿಡಿದು ಜಾಗೃತಿ ಮೂಡಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ಸಹ ಇದ್ದರು. ರಜೆ ನಿಮಿತ್ತ ಬೀಚ್ ನಲ್ಲಿ ಸೇರಿದ್ದ 1000 ಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಫಲಕಗಳನ್ನು ಅಳವಡಿಸಲಾಗಿತ್ತು, ನನ್ನ ಮತ ನನ್ನ ಹೆಮ್ಮೆ , ಚುನಾವಣಾ ಪರ್ವ ದೇಶದ ಗರ್ವ ಸ್ಲೋಗನ್ ಗಳನ್ನು ಕೂಗಲಾಯಿತು.
ಜಿಲ್ಲೆಯ ಬುದ್ಧಿವಂತ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಬೇಕು ಎನ್ನುವ ಉದ್ದೇಶದಿಂದ ಭಿನ್ನ ರೀತೀಯಲ್ಲಿ ಮತದಾರರನ್ನು ಸೆಳೆಯುವ ಸಲುವಾಗಿ ಭಿನ್ನ ಭಿನ್ನ ಆಲೋಚನೆಗಳ ಮೂಲಕ ಮತದಾನದ ಅರಿವು ಮೂಡಿಸಲಾಗುತ್ತಿದೆ ಎಂದು ಜಿ.ಪಂ. ಸಿಇಓ ಡಾ. ಆನಂದ ಕೆ ಅವರು ತಿಳಿಸಿದರು.