ನವದೆಹಲಿ: ಯುದ್ಧ ಪೀಡಿತ ಪ್ಯಾಲೆಸ್ಟೀನ್ ಜನರಿಗಾಗಿ ಭಾರತ ವೈದ್ಯಕೀಯ ಸಾಮಗ್ರಿಗಳು ಮತ್ತು ಪರಿಹಾರ ವಸ್ತುಗಳನ್ನು ಕಳಿಸೊದೆ. ಪರಿಹಾರ ಸಾಮಾಗ್ರಿ ಹೊತ್ತ ವಿಮಾನ ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಿಂದ ಹೊರಟಿದೆ. ಪ್ಯಾಲೆಸ್ಟೀನ್ ಜನರಿಗಾಗಿ
ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆ ವಿಮಾನವು ಈಜಿಪ್ಟ್ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ.
ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್ಗಳು, ಹೊದಿಕೆ, ನೈರ್ಮಲ್ಯ ಉಪಕರಣಗಳು, ನೀರು ಶುದ್ಧೀಕರಣ ಮಾತ್ರೆಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಪ್ಯಾಲೆಸ್ಟೀನ್ಗೆ ರವಾನಿಸಲಾಗಿದೆ.
ಪ್ಯಾಲೆಸ್ಟೀನ್ ಜನರಿಗೆ ಮಾನವೀಯ ನೆಲೆಯಲ್ಲಿ ನೆರವು ಒದಗಿಸುವುದನ್ನು ಭಾರತವು ಮುಂದುವರಿಸಲಿದೆ ಎಂದು ಭಾರತ ಭರವಸೆ ನೀಡಿತ್ತು.