ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ಭಾರತ ಎಂಟು ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ (37) ಹಾಗೂ ಸೂರ್ಯಕುಮಾರ್ ಯಾದವ್ (13) ಕ್ರೀಸಿನಲ್ಲಿದ್ದಾರೆ.ಭಾರತಕ್ಕೆ
ವಿರಾಟ್ ಕೊಹ್ಲಿ (9) ಹಾಗೂ ರಿಷಭ್ ಪಂತ್ (4) ವಿಕೆಟ್ ನಷ್ಟವಾಗಿದೆ. ಇಂಗ್ಲೆಂಡ್ ಪರ ರೀಸ್ ಟಾಪ್ಲಿ ಹಾಗೂ ಸ್ಯಾಮ್ ಕರನ್ ತಲಾ ಒಂದು ವಿಕೆಟ್ ಗಳಿಸಿದ್ದಾರೆ.ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತೀಯ ಕಾಲಮಾನ 7.30ಕ್ಕೆ ಟಾಸ್ ನಿಗದಿಯಾಗಿತ್ತು. ಆದರೆ ಮಳೆ ಹಾಗೂ ಒದ್ದೆಯಾದ ಮೈದಾನದಿಂದಾಗಿ ಪಂದ್ಯ ಆರಂಭವು ವಿಳಂಬಗೊಂಡಿತು. ಭಾರತೀಯ ಕಾಲಮಾನ 8.50ಕ್ಕೆ ಟಾಸ್ ಹಾಕಲಾಯಿತು. ರಾತ್ರಿ 9.15ಕ್ಕೆ ಪಂದ್ಯ ಆರಂಭವಾಗಿದೆ. ಅಲ್ಲದೆ ಓವರ್ಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.
ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ.ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.