ಪುತ್ತೂರು:ಸುಳ್ಯದ ನಗರದ ಸೂಡ, ಮಹಾಯೋಜನೆಯಲ್ಲಿ ನಿಯಮಗಳ ಸರಳೀಕರಣ ಮಾಡಬೇಕು, 2013 ರ ಪೂರ್ವದ ಕಟ್ ಕನ್ವರ್ಷನ್ ಗೆ ಸೂಡ ಅನುಮೋದನೆಯಿಂದ ವಿನಾಯಿತಿ ಮೊದಲಾದ ಸಮಸ್ಯೆಗಳ ಪರಿಹಾರ ಆಗ್ರಹಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಮಾಡಿ ಸುಳ್ಯದ ಸೂಡ
ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಅರ್ಪಿಸಿದರು.ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಕೆಲವು ಸೂಡ ನಿಯಮಗಳಿಂದ ತೊಡಕಾಗಿದೆ, ಸುಳ್ಯ ನಗರದಲ್ಲಿ ಮಹಾ ಯೋಜನೆ ಅನುಮೋದನೆಗೆ ಬಾಕಿ ಇರುತ್ತದೆ ಪರಿಷ್ಕೃತ ಮಹಾ ಯೋಜನೆಯನ್ನು ಸುಳ್ಯವನ್ನು ವಿಶೇಷ ಭೌಗೋಳಿಕ ಹಿನ್ನಲೆಯ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿಯಮಗಳ ಸರಳೀಕರಣದೊಂದಿಗೆ ಅನುಮೋದನೆ ನೀಡುವುದು.ಸುಳ್ಯ ದಲ್ಲಿ ನಗರ ಯೋಜನಾ ಪ್ರಾಧಿಕಾರದ ಕಾನೂನು ಜಾರಿ ಯ ಪೂರ್ವದಲ್ಲಿ ಅಂದರೆ 2013 ಕ್ಕೆ ಮುಂಚಿತವಾಗಿ ಆದ ಕಟ್ ಕನ್ವರ್ಷನ್ ಆಗಿ ಕನ್ವರ್ಷನಗೆ ಸೂಡ ಅನುಮೋದನೆ ಯಿಂದ ವಿನಾಯಿತಿ ನೀಡುವುದು, 2013 ಕ್ಕೆ ಮುಂಚಿತವಾಗಿ ನಿರ್ಮಾಣ ಗೊಂಡ ಕಟ್ಟಡಗಳ ಅಭಿವೃದ್ಧಿ, ವಿಸ್ತರಣೆ ಗೆ ನಗರ ಪಂಚಾಯತ್ ನಿಂದಲೇ ಅನುಮತಿ ನೀಡುವುದು.ಮೊದಲಾದ ಸಮಸ್ಯೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರೊಂದಿಗೆ ಶಿಫಾರಸು ಮಾಡಿ ಸಮಸ್ಯೆ ಪರಿಗರಿಸಲು ಮನವಿಯಲ್ಲಿ ವಿನಂತಿಸಿದ್ದಾರೆ









