ಸುಳ್ಯ:ಗ್ರಾಮೀಣ ಭಾಗದ ಕೃಷಿಕರು ಬೆಳೆಯುವ ಅಡಿಕೆಗೆ ಉತ್ತಮ ದರ ನೀಡಲು ಮಾಸ್ ಸಂಸ್ಥೆ ಬದ್ಧವಾಗಿದೆ. ಮಾಸ್ ಯಾರೊಂದಿಗೂ ಸ್ಪರ್ಧೆ ನಡೆಸುತ್ತಿಲ್ಲ, ಆದರೆ ಯಾವುದೇ ಸಂಸ್ಥೆಗಳಿಗೂ ಕಡಿಮೆ ಆಗದ ರೀತಿಯಲ್ಲಿ ಮಾಸ್ ಅಡಿಕೆಗೆ ಉತ್ತಮ ದರ ನೀಡಲಿದೆ. ಅದುದರಿಂದ ಮಾಸ್ ಅಡಿಕೆ ಖರೀದಿ ಕೇಂದ್ರದ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು
ಮಾಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಹೇಳಿದ್ದಾರೆ.
ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಂಗಳೂರು ‘ಮಾಸ್ ಲಿಮಿಟೆಡ್’ ಇವರಿಂದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ .ಎನ್. ರಾಜೇಂದ್ರ ಕುಮಾರ್ ಅವರ ಸಹಕಾರದೊಂದಿಗೆ ತೆರೆಯಲಾದ ‘ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಅಡಿಕೆ ಕೃಷಿಕರ ಹಿತ ಕಾಪಾಡುವ ಹಿತ ದೃಷ್ಠಿಯಿಂದ 2001ರಲ್ಲಿ ಮಾಸ್ ಸಂಸ್ಥೆ ಆರಂಭಗೊಂಡಿತು. 24 ವರ್ಷದಲ್ಲಿ ಅತ್ಯುತ್ತಮ ಸೇವೆ ನೀಡಿದ್ದು 5,850 ರೈತ ಸದಸ್ಯರಿದ್ದು 2.16 ಕೋಟಿ ಪಾಲು ಬಂಡವಾಳದೊಂದಿಗೆ ಕಾರ್ಯಾಚರಿಸುತಿದೆ. 64 ಸಹಕಾರಿ ಸಂಘಗಳ ಸಹಕಾರದಲ್ಲಿ ಮಾಸ್ ಸಂಸ್ಥೆ ಕಾರ್ಯಾಚರಿಸುತ್ತಿದ್ದು 12ನೇ ಅಡಿಕೆ ಖರೀದಿ ಕೇಂದ್ರ ಇಂದು ಉದ್ಘಾಟನೆಯಾಗಿದೆ. ಸುಳ್ಯದಲ್ಲಿ ಸುಸಜ್ಜಿತ ಅಡಿಕೆ ಸಂಸ್ಕರಣಾ ಘಟಕ ಕಾರ್ಯಾಚರಿಸುತಿದೆ. 2024ರಲ್ಲಿ 167 ಕೋಟಿ, 2025ರಲ್ಲಿ 195 ಕೋಟಿ ವ್ಯವಹಾರ ನಡೆಸಲಾಗಿದೆ. ಸದಸ್ಯರಿಗೆ ಶೇ.6 ಡಿವಿಡೆಂಟ್ ನೀಡಲಾಗಿದೆ ಎಂದು ಸೀತರಾಮ ರೈ ಅವರು ವಿವರಿಸಿದರು.

ಸಹಕಾರಿ ಸಂಘದ ಸಿರಿ ಸಹಕಾರಿ ಸೌಧದಲ್ಲಿ ನಡೆದ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಮಾತನಾಡಿ ಗ್ರಾಮದ ಎಲ್ಲಾ ಕೃಷಿಕರು ಮಾಸ್ ಸಂಸ್ಥೆಯ ಮೂಲಕ ಅಡಿಕೆಯನ್ನು ಮಾರಾಟ ಮಾಡಬೇಕು ಆ ಮೂಲಕ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಉಬರಡ್ಕಮಿತ್ತೂರು,ಶ್ರೀ ವೆಂಕಟರಮಣ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ ಜಯರಾಮ, ಮಾಸ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಮುಂಡೋಡಿ,
ನರಸಿಂಹ ದೇವಸ್ಥಾನದ ಮೊಕ್ತೇಸರರಾದ ಜತ್ತಪ್ಪ ಗೌಡ, ಜೋಡು ದೈವಗಳ ದೈವಸ್ಥಾನ, ಮಿತ್ತೂರು ಇದರ ಅಧ್ಯಕ್ಷರಾದ ವೆಂಕಟ್ರಮಣ ಕೆದಂಬಾಡಿ, ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ರತನ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಹಕಾರ ರತ್ನ ಪುರಸ್ಕೃತ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ ಜಯರಾಮ ಅವರನ್ನು ಸನ್ಮಾನಿಸಲಾಯಿತು. ಮಾಸ್ ಸಂಸ್ಥೆಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ನಿರ್ದೇಶಕ ನಿತ್ಯಾನಂದ ಮುಂಡೋಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಸ್ ಲಿ. ಸಿಇಒ ಟಿ.ಮಹಾಬಲೇಶ್ವರ ಭಟ್, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ಸಿಇಒ ಜಯಪ್ರಕಾಶ್. ಯು, ಮಾಸ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.

ಮಾಸ್ ಲಿ. ಸಿಇಒ ಟಿ. ಮಹಾಬಲೇಶ್ವರ ಭಟ್ ಸ್ವಾಗತಿಸಿ,ಉಬರಡ್ಕಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ವಂದಿಸಿದರು. ದೀಕ್ಷಿತಾ ಪ್ರಾರ್ಥಿಸಿ, ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.














