ಮರ್ಕಂಜ: ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದಯಾನಂದ ಪುರ, ಉಪಾಧ್ಯಕ್ಷರಾಗಿ ಚೆನ್ನಕೇಶವ ದೋಳ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ
ಇಬ್ಬರು ಅವಿರೋಧವಾಗಿ ಆಯ್ಕೆ ನಡೆಯಿತು.ನಿರ್ದೇಶಕರಾದ ಮಹಾಬಲ ಕಟ್ಟಕೋಡಿ, , ಲಿಂಗಪ್ಪ ನಾಯ್ಕ ತೋಟಚಾವಡಿ, ನವೀನ ದೊಡ್ಡಿಹಿತ್ಲು, ಮೋನಪ್ಪ ಪೂಜಾರಿ ಹೈದಂಗೂರು, ವೆಂಕಟ್ರಮಣ ಗೌಡ ಕೆ., ಅಚ್ಚುತ ಮಾಸ್ತರ್ ತೇರ್ಥಮಜಲು, ಸರಸ್ವತಿ ಕಕ್ಕಾಡು, ಅಕ್ಷತಾ ಕೆ.ಸಿ., ಲತಾಶ್ರೀ, ಅಣ್ಣು ಅಂಗಡಿಮಜಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣಾಧಿಕಾರಿ ಬಿ. ನಾಗೇಂದ್ರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಕುಮಾರ್ ಸಹಕರಿಸಿದರು.