ಮರ್ಕಂಜ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾವನಾ ಸುಗಮ ಸಂಗೀತ ಬಳಗ ಮತ್ತು ಕನ್ನಡ ಸಂಘ, ಸರಕಾರಿ ಪ್ರೌಢ ಶಾಲೆ ಮರ್ಕಂಜ ಇದರ ಆಶ್ರಯದಲ್ಲಿ ಮಳೆ ಹಾಡುಗಳ ಕಲರವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸರಕಾರಿ ಪ್ರೌಢ ಶಾಲಾ ಮೇಲುಸ್ತುವಾರಿ ಸಮಿತಿಯ
ಅಧ್ಯಕ್ಷರಾದ ಆನಂದ ಬಾಣೂರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿದ್ದ ಮುಖ್ಯಶಿಕ್ಷಕಿ ವೀಣಾ ಎಂ ಟಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಂಗೀತ ಹಾಗೂ ಸಾಹಿತ್ಯಾಸಕ್ತಿಯನ್ನು ಮೂಡಿಸಲು ಈ ಕಾರ್ಯಕ್ರಮ ಪೂರಕ ಎಂದು ಹೇಳಿದರು. ಸಂಗೀತ ವರ್ಷಧಾರೆ ಮಳೆ ಕಲರವ ಕಾರ್ಯಕ್ರಮವನ್ನು ಭಾವನಾ ಸುಗಮ ಸಂಗೀತ ಬಳಗದ ಕೆ ಆರ್ ಗೋಪಾಲಕೃಷ್ಣ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ ಸಾ ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವೇದಿಕೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಹಿತಾಶ್ರೀ ಜೆ ವಿ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಸ್ವಾಗತಿಸಿ ಕನ್ನಡ ಸಂಘದ ಸಂಚಾಲಕಿ ವಿಜಯಲಕ್ಷ್ಮಿ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಮತಿ ಕೆ ಕಾರ್ಯಕ್ರಮ ನಿರೂಪಿದರು.