ಮರ್ಕಂಜ: ಮರ್ಕಂಜ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಮರ್ಕಂಜ ಗ್ರಾಮ ಪಂಚಾಯತ್ನಲ್ಲಿ ರೂ. 6.75 ಲಕ್ಷದ ಅನುದಾನದ ಯೋಗಕೇಂದ್ರ
ಸಭಾಂಗಣದ ಶಂಕುಸ್ಥಾಪನೆ ಹಾಗೂ ರೂ. 25 ಲಕ್ಷ ಅನುದಾನದಿಂದ ನಿರ್ಮಾಣವಾದ ಗೋಳಿಯಡ್ಕ ಮಿನುಂಗೂರು ರಸ್ತೆಯ
ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ಮೇನಲ, ಮರ್ಕಂಜ ಗ್ರಾ.ಪಂ. ಅಧ್ಯಕ್ಷರಾದ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ ಮತ್ತಿತರರು ಉಪಸ್ಥಿತರಿದ್ದರು.