ಸುಳ್ಯ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸುಳ್ಯ ವತಿಯಿಂದ ಗುತ್ತಿಗಾರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮರ್ಕಂಜ ಗ್ರಾಮ ಸಮಿತಿಯ ಸಭೆ ಇಂದು ನಡೆಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಂ , ಕೆ.ಪಿ.ಸಿ.ಸಿ ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ,ಸುಳ್ಯ ವಿಧಾನಸಭಾ ಕ್ಷೇತ್ರದ
ವೀಕ್ಷಕರಾದ ಎನ್ ಜಯಪ್ರಕಾಶ್ ರೈ, ಪ್ರಚಾರ ಸಮಿತಿ ಉಸ್ತುವಾರಿ ಎಂ. ವೆಂಕಪ್ಪ ಗೌಡ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ, ಮಾಜಿ ಪ್ರಚಾರ ಸಮಿತಿ ಅಧ್ಯಕ್ಷ ರಾಜಾರಾಂ ಭಟ್ ಬೆಟ್ಟ, ಸಾಮಾಜಿಕ ಜಾಲ ಸಮಿತಿಯ ಚೇತನ್ ಕಜೆಗದ್ದೆ, ಮರ್ಕಂಜ ಗ್ರಾಮ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ರೈ, ಗ್ರಾಮ ಸಮಿತಿ ಕಾರ್ಯದರ್ಶಿ ಕೊರಗಪ್ಪ, ವಾಸುದೇವ ಗೌಡ ಪುರ, ಅನಿಲ್ ಕುಮಾರ್ ಅಂಬೆಕಲ್ಲು, ಜಯರಾಮ ದೇಶಕೋಡಿ, ಯಶವಂತ ಸೂಟೆಗದ್ದೆ, ಜಗದೀಶ್ ಉಬ್ರಾಳ, ಮನಮೋಹನ್ ದೊಡ್ಡಿಹಿತ್ಲು, ಕೊರಗಪ್ಪ ಗೌಡ ಪಾರೆಮಜಲು, ವಿಶ್ವನಾಥ ರೈ ಮತ್ತಿತರರು ಉಪಸ್ಥಿತರಿದ್ದರು.