ಸುಳ್ಯ:ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶ ಪ್ರತಿಷ್ಠಾಪನೆ ಎಪ್ರಿಲ್ ತಿಂಗಳಲ್ಲಿ ನಡೆಯಲಿದ್ದು. ಈ ಬಗ್ಗೆ ಸುಳ್ಯ ನಗರದ ಶಾಂತಿನಗರ ಹಳೆಗೇಟ್ ಮತ್ತು ಜಾಲ್ಸೂರು ಗ್ರಾಮದ ಸೋಣಂಗೇರಿ ಪಿಲಿಕೊಡಿ ಕುಕ್ಕುಂದೂರು ಪರಿಸರದ ಧಾರ್ಮಿಕ ಸಾಮಾಜಿಕ ರಾಜಕೀಯ ಮತ್ತು ವಿವಿಧ ಸಂಘಟನೆಯ ಪ್ರಮುಖರ ಸಭೆ ಕುಂಭಕ್ಕೋಡು ಅಚ್ಚುತ ಭಟ್ ಸಭಾ ಭವನದಲ್ಲಿ ನಡೆಯಿತು. ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ
ದೇವಸ್ಥಾನ ಕ್ಷೇತ್ರ ಸೇವಾ ಸಮಿತಿ ಪೈಚಾರ್ ಸುಳ್ಯ ಇದರ ಬ್ರಹ್ಮ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಸುಂದರ ರಾವ್, ಕಾರ್ಯಾಧ್ಯಕ್ಷ ದೇವಿಪ್ರಸಾದ್ ಪ್ರದಾನ ಕಾರ್ಯದರ್ಶಿ ಯಶವಂತ ಪಟ್ರುಕೋಡಿ, ಕೋಶಾಧಿಕಾರಿ ಕೇಶವ ಮಾಸ್ತರ್, ಸಂಚಾಲಕರಾದ ರಾಜೇಶ್ ಶೆಟ್ಟಿ ಮೇನಾಲ ಉಪಾಧ್ಯಕ್ಷ ಚಿದಾನಂದ ವಿದ್ಯಾನಗರ, ಸಹ ಸಂಚಾಲಕರಾದ ನಾರಾಯಣ ಎಸ್ ಎಂ ಶಾಂತಿನಗರ ಕಾರ್ಯದರ್ಶಿಗಳಾದ ರಾಘವ ಪೆರಾಜೆ ಜಗದೀಶ್ ಎನ್.ಅರ್. ಗೌರವ ಸಲಹೆ ಗಾರರಾದ ಚಂದ್ರ ರಾವ್, ಆನಂದ ಬೆಟ್ಟಂಪಾಡಿ, ದಾಮೋದರ ಮಂಚಿ, ಬಾಲಗೋಪಾಲ ಸೇರ್ಕಜೆ, ಮಲ್ಲೇಶ್ ಬೆಟ್ಟಂಪಾಡಿ, ಶ್ರೀನಿವಾಸ್ ರಾವ್ ಹಳೆಗೇಟ್, ಸೇವಾ ಸಮಿತಿಯ ಅಧ್ಯಕ್ಷ ವೇಣುಗೋಪಾಲ ಎಸ್. ಮುಕ್ತೇಸರರಾದ ಸಂಜೀವ, ಹರ್ಷ ಕರುಣಾಕರ, ಸಿಂಧೂರ ಶೇಟ್, ಸಂಧ್ಯಾ ರಾವ್ ಹಳೆಗೆಟ್, ಚಂದ್ರ ಶೇಖರ, ರಾಧಾಕೃಷ್ಣ, ಕೃಷ್ಣ ರಾಜು, ಪ್ರೇಮ, ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.








