ಸುಳ್ಯ: ಸುಳ್ಯದ ಮಾರ್ನಿಂಗ್ ಕ್ರಿಕೆಟ್ ಕ್ಲಬ್ನ (ಎಂಸಿಸಿ) ಹತ್ತನೇ ವರ್ಷಾಚರಣೆಯ ಪ್ರಯುಕ್ತ ಎಂಸಿಸಿ ಆಶ್ರಯದಲ್ಲಿ ಅ.29ರಂದು ಸುಳ್ಯದಲ್ಲಿ ರಸ್ತೆ ಓಟ ಸ್ಪರ್ಧೆ ನಡೆಯಲಿದೆ. ಪುರುಷರ ವಿಭಾಗ, ಮಹಿಳೆಯರ ವಿಭಾಗ, 17 ವರ್ಷ ಕೆಳಗಿನ ಬಾಲಕರ ವಿಭಾಗ, 17 ವರ್ಷ ಕೆಳಗಿನ ಬಾಲಕಿಯರ ವಿಭಾಗ ಹೀಗೆ
4 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪುರುಷರ ಮುಕ್ತ ರಸ್ತೆ ಓಟ ಸ್ಪರ್ಧೆ ಅರಂತೋಡಿನಿಂದ, ಮಹಿಳೆಯರ ವಿಭಾಗದ ರಸ್ತೆ ಓಟ ಪೆರಾಜೆಯಿಂದ, 17 ವರ್ಷ ಕೆಳಗಿನ ಬಾಲಕರ ಹಾಗೂ 17 ವರ್ಷ ಕೆಳಗಿನ ಬಾಲಕಿಯರ ವಿಭಾಗದ ರಸ್ತೆ ಓಟ ಅರಂಬೂರಿನಿಂದ ಆರಂಭ ಗೊಳ್ಳಲಿದೆ. ಸ್ಪರ್ಧೆಯ ವಿಜೇತರಿಗೆ ನಗದು, ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ
ಎಂದು ಎಂಸಿಸಿ ಅಧ್ಯಕ್ಷ ಗಿರೀಶ್ ಅಡ್ಪಂಗಾಯ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರನ್ನು (ದೂ.9449268699) ಸಂಪರ್ಕಿಸಬಹುದು.









