ಸುಳ್ಯ: ಮಂಡೆಕೊಲು ಗ್ರಾಮದ ಬೊಳುಗಲ್ಲಿನಲ್ಲಿ ಮರ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ನಡೆದಿದೆ. ಬೊಳುಗಲ್ಲು ಬಾಲಚಂದ್ರ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.ಮಂಡೆಕೋಲು ಭಾಗದಲ್ಲಿ ಭಾರೀ ಗಾಳಿ ಮಳೆಯಾಗಿದ್ದು ಬಾಲಚಂದ್ರರ ಮನೆಯ ಸಮೀಪ ಇದ್ದ
ಬೃಹತ್ ಗಾತ್ರದ ಬೀಟೆ ಮರ ಬುಡ ಸಮೇತ ಮಗುಚಿ ಮನೆ ಮೇಲೆ ಬಿದ್ದಿದೆ. ಈ ವೇಳೆ ಬಾಲಚಂದ್ರರು ಮನೆಯೊಳಗಿದ್ದು ಶಬ್ದ ಕೇಳಿ ಹಿಂಬದಿಯಿಂದಾಗಿ ಹೊರಗೆ ಬಂದಿದ್ದಾರೆ. ಹೊಸ ಮನೆ ನಿರ್ಮಾಣ ಮಾಡಿದ್ದು ಇತ್ತೀಚೆಗೆ ಮನೆ ಕೆಲಸ ಪೂರ್ತಿಗೊಂಡಿತ್ತು.
ಮರ ಬಿದ್ದುದರಿಂದ ಮನೆ ಹಾಗೂ ಕೊಟ್ಟಿಗೆಗೂ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯವರು, ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳು ಭೇಟಿ ನೀಡಿ ಪತಿಶೀಲನೆ ನಡೆಸಿದ್ದಾರೆ.