ಸುಳ್ಯ:ಸುಳ್ಯ ತಾಲೂಕಿನ ಜಾಲ್ಸೂರು ಸಮೀಪ ಮಾಪಳಡ್ಕ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರವ ಮಹಾತ್ಮರುಗಳ ಸ್ಮರಣೆಯೊಂದಿಗೆ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರವ ಮಾಪಳಡ್ಕ ಮಖಾಂ ಉರೂಸ್ ಕಾರ್ಯಕ್ರಮವು ಜನವರಿ 24 ರಿಂದ 26 ತನಕ ನಡೆಯಲಿದೆ ಎಂದು ಮಾಪಳಡ್ಕ ದರ್ಗಾ ಶರೀಫ್ ಮುದರಿಸ್ ಹಾಪಿಳ್ ಅಬ್ದುಲ್ ಸಲಾಂ ನಿಝಾಮಿ ತಿಳಿಸಿದರು.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು ಜ.24ರಂದು ಶನಿವಾರ ಅಸರ್ ನಮಾಜಿನ ನಂತರ ಮಖಾಂ ಝಿಯಾರತ್ನೊಂದಿಗೆ ಅಧಿಕೃತ ಚಾಲನೆಗೊಳ್ಳಲಿದ್ದು ಅಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ಸಯ್ಯಿದ್ ಪೂಕುಂಞ್ಞಿ ತಂಙಳ್ ಆದೂರು ಅವರು ದುವಾಶಿರ್ವಚನ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.ಇರುವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿಯ ಗೌರವಾಧ್ಯಕ್ಷರಾದ ಇಬ್ರಾಹಿಂ ಹಾಜಿ ಸಂಕೇಶ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.ಮಹಮ್ಮದ್ ಇರ್ಷಾದ್ ಅಝ್ಹರಿ ಮಲಪ್ಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಜನವರಿ 25 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಮಗ್ರಿಬ್ ನಮಾಜಿನ ಬಳಿಕ ದಿಕ್ರ್ ದುಆಃ ಸಂಗಮ ನಡೆಯಲಿದೆ. ನೇತೃತ್ವವನ್ನು ಅಸ್ಸಯ್ಯದ್ ಎನ್ ಪಿ ಎಂ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ವಹಿಸಲಿದ್ದಾರೆ.ಜಮಾಅತ್ ಕಮಿಟಿ ಕೋಶಾಧಿಕಾರಿ ಹಸೈನಾರ್ ಧರ್ಮತಣ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ, ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಕ್ಕಿಂಜೆಯವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಯುವ ಉದ್ಯಮಿ ಮಾಪಳಡ್ಕ ದರ್ಸ್ ಕಟ್ಟಡ ದಾನಿ ಅಬ್ದುರಹಮಾನ್ ಸಂಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಜ.26 ರಂದು ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ಜಮಾತ್ ಕಮಿಟಿ ಅಧ್ಯಕ್ಷರಾದ ಎ.ಬಿ.ಅಶ್ರಫ್ ಸಅದಿಯವರು ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಶಿದ್ ಬುಖಾರಿ ಕುಟ್ಯಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಉರೂಸ್ ಸಮಾರೋಪ ಪ್ರಾರ್ಥನಾ ಸಂಗಮಕ್ಕೆ ಸಯ್ಯದ್ ಅಬ್ದುರಹಮಾನ್ ಮಶ್ಹೂದ್ ಅಲ್ ಅಝ್ಹರಿ ಕೂರತ್ ತಂಙಳ್ ಅವರು ನೇತೃತ್ವ ವಹಿಸಲಿದ್ದಾರೆ.
ಉರೂಸ್ ಅಂಗವಾಗಿ ಧ್ವಜಾರೋಹಣ, ಪರಿಸರ ಸ್ವಚ್ಛತೆ, ಮತ ಪ್ರಭಾಷಣ, ಅನ್ನದಾನ, ದಿಕ್ರ್ ದುಆಃ ಸಂಗಮ, ಮೌಲಿದ್ ಪಾರಾಯಣ, ತಬರ್ರುಕ್ ವಿತರಣೆ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಹಲವಾರು ಉನ್ನತ ಉಲಮಾ ಉಮರಾ ಸಾದಾತುಗಳು ಸಾಮಾಜಿಕ ರಾಜಕೀಯ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಇರುವಂಬಳ್ಳ ಬದ್ರಿಯಾ ಜಮಾಅತ್ ಕಮಿಟಿ ಹಾಗೂ ಮಾಪಳಡ್ಕ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಎ ಬಿ ಅಶ್ರಫ್ ಸಹದಿ,ಕಾರ್ಯದರ್ಶಿ ಟಿ.ಹೆಚ್. ಮುಹಮ್ಮದ್ ಕುಂಞಿ ಹಾಜಿ ತುಪ್ಪಕ್ಕಲ್,ಕೋಶಾಧಿಕಾರಿ ಹಸೈನಾರ್ ದರ್ಮತಣ್ಣಿ ಉಪಸ್ಥಿತರಿದ್ದರು.












