ಸುಳ್ಯ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಟಾಪನೆಯ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ ಪವಿತ್ರ ಮಂತ್ರಾಕ್ಷತೆಯ ಸುಳ್ಯ ಪುರ ಪ್ರವೇಶ ಕಾರ್ಯಕ್ರಮವು ಗುರುವಾರ ಸಂಜೆ 6:30ಕ್ಕೆ ನಡೆಯಿತು. ಸುಳ್ಯದಿಂದ ಪುತ್ತೂರಿಗೆ ತೆರಳಿದ ಹಿಂದೂ ಕಾರ್ಯಕರ್ತರು ಪುತ್ತೂರಿನ ಶ್ರೀ ವೆಂಕಟರಮಣ ದೇವಸ್ಥಾನದಿಂದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಸುಳ್ಯಕ್ಕೆ ತಂದಾಗ, ಅದನ್ನು ಸುಳ್ಯ ಶ್ರೀರಾಮ ಭಜನಾ ಮಂದಿರದ ಬಳಿಯಲ್ಲಿ ಸೇರಿದ ನೂರಾರು ಶ್ರದ್ದಾ ಭಕ್ತಿಯಿಂದ
ಸ್ವಾಗತಿಸಿದರು. ಬಳಿಕ ಭಜನೆ ಹಾಗೂ ದೇವತಾ ಸ್ತುತಿಯೊಂದಿಗೆ ಮೆರವಣಿಗೆಯಲ್ಲಿ ಪವಿತ್ರ ಮಂತ್ರಾಕ್ಷತೆಯನ್ನು ಶ್ರೀರಾಮ ಭಜನಾ ಮಂದಿರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪುರೋಹಿತರು ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಹಿರಿಯರಾದ ಚಂದ್ರಶೇಖರ ತಳೂರು ಅವರು ಒಂದು ವಾರಗಳ ಕಾಲ ಈ ಮಂತ್ರಾಕ್ಷತೆಯು ಶ್ರೀರಾಮ ಭಜನಾ ಮಂದಿರದಲ್ಲಿ ಪೂಜೆ ಗೊಳ್ಳುತ್ತದೆ. ಈ ಪವಿತ್ರ ಮಂತ್ರಾಕ್ಷತೆಯನ್ನು ಸುಳ್ಯ ತಾಲೂಕಿನ ಪ್ರತಿ ಮನೆ ಮನೆಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್. ಅಂಗಾರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಹಾಗೂ ಪ್ರಮುಖರಾದ ಸೋಮಶೇಖರ ಪೈಕ, ನಾಗರಾಜ್ ಭಟ್, ಪಿ.ಕೆ. ಉಮೇಶ್, ಶೋಭಾ ಚಿದಾನಂದ, ಅಕ್ಷಯ್ ಕುರುಂಜಿ, ಡಾ. ಹರಪ್ರಸಾದ್ ತುದಿಯಡ್ಕ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಯಶೋಧಾ ರಾಮಚಂದ್ರ, ಜಯರಾಜ್ ಕುಕ್ಕೇಟಿ, ಹೇಮಂತ ಮಠ, ಮಧುಸೂದನ್, ಯಶೋಧ ರಾಮಚಂದ್ರ, ಶಶಿಕಲಾ ನೀರಬಿದರೆ, ಭಾಸ್ಕರ್ ನಾಯರ್, ಕಿಶೋರಿ ಶೇಟ್, ಗೋಪಾಲ್ ನಡುಬೈಲು, ಗೋಪಾಲಕೃಷ್ಣ ಭಟ್ , ಮಹಾಬಲ ಯು.ಕೆ, ಶ್ರೀನಿವಾಸ್, ಸಮಿತಿಯ ಸಂಯೋಜಕ ಹೇಮಚಂದ್ರ ದೊಡ್ಡತೋಟ, ಸಂಚಾಲಕ ಹರಿಪ್ರಸಾದ್ ಸಹ ಸಂಚಾಲಕ ವಿನಯ್ ಕುಮಾರ್ ಕಂದಡ್ಕ ನವೀನ್ ಎಲಿಮಲೆ, ಸುಧಾಕರ್ ಕಾಮತ್, ಕೃಷ್ಣ ಕಾಮತ್, ಲತೀಶ್ ಗುಂಡ್ಯ, ಭಾನುಪ್ರಕಾಶ್ ಪೆರುಮುಂಡ, ಮತ್ತಿತರ ಪಾಲ್ಗೊಂಡರು.
ದಶಂಬರ 5ರಂದು ಬೆಳಿಗ್ಗೆ ಸುಳ್ಯದಲ್ಲಿ ತಾಲೂಕು ಸಮಾವೇಶ ನಡೆದು ತಾಲೂಕಿನ ಪ್ರತಿ ಬೂತುಗಳಿಗೆ ಈ ಪವಿತ್ರ ಮಂತ್ರಾಕ್ಷತೆಯನ್ನು ಹಂಚಲಾಗುವುದು. ಜನವರಿ 1ರಿಂದ 15 ರ ತನಕ ಪ್ರತಿ ಮನೆಗಳಿಗೂ ಈ ಅಕ್ಷತೆಯನ್ನು ತಲುಪಿಸಲಾಗುವುದು ಎಂದು ಸಮಿತಿಯ ಸಂಯೋಜಕರು ತಿಳಿಸಿದ್ದಾರೆ.