ಬೆಳ್ಳಾರೆ: ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ನೂತನ ಶ್ರೀರಾಮ ಮಂದಿರದ ಲೋಕಾರ್ಪಣೆ ಮತ್ತು ಶ್ರೀರಾಮ ಪ್ರತಿಷ್ಠೆಯ ಮಂತ್ರಾಕ್ಷತೆ ವಿತರಣೆ ಸಂಸದ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆಯಿತು.ಬೆಳ್ಳಾರೆಯ ಬಾಳಿಲದ ತ್ರಿವೇಣಿ ಪರಮೇಶ್ವರ್ ಅವರ ಮನೆ ಸೇರಿ ವಿವಿಧ

ಮನೆಗಳಿಗೆ ಮಂತ್ರಾಕ್ಷತೆ ಅಭಿಯಾನದ ಅಂಗವಾಗಿ ಸಂಸದರು ಮಂತ್ರಾಕ್ಷತೆ ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಶ್ರೀನಾಥ್ ಬಾಳಿಲ, ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ರೈ ಮೇನಾಲ, ನಿಕೇಶ್ ಉಬರಡ್ಕ, ಎನ್.ಆರ್.ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.









