ಕಲ್ಮಕಾರು: ದಕ್ಷಿಣ ಕನ್ನಡ – ಕೊಡಗು ಜಿಲ್ಲೆಯ ಗಡಿ ಭಾಗವಾದ ಕಡಮಕಲ್ಗೆ ಮಡಿಕೇರಿ ಶಾಸಕ ಮಂಥರ್ ಗೌಡ ಭೇಟಿ ನೀಡಿದರು. ಕಡಮಕಲ್ ನಿವಾಸಿಗಳ ಅಹವಾಲು ಸ್ವೀಕರಿಸಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಭರವಸೆ ನೀಡಿದರು. ಈ ಭಾಗದ ನಿವಾಸಿಗಳು ಮುಖ್ಯವಾಗಿ ಗಾಳಿಬೀಡು ಕಡಮಕಲ್ಲು ರಸ್ತೆ ಸಂಪರ್ಕ,ವಿದ್ಯುತ್ ಸಮಸ್ಯೆ, ಮೊಬೈಲ್ ಟವರ್ನ ಸಮಸ್ಯೆ ಕುಡಿಯುವ
ನೀರಿನ ಸಮಸ್ಯೆ ಮತ್ತು ಜಮೀನಿನ ಮೂಲ ದಾಖಲೆಗಳನ್ನು ಸರಿಪಡಿಸುವ ಬಗ್ಗೆ ಚರ್ಚಿಸಿದರು. ಇದಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗಿ ತಕ್ಷಣ ಕ್ರಮ ಕೈಗೊಳ್ಳೋದಾಗಿ ತಿಳಿಸಿದರು.ಕಲ್ಮಕಾರು – ಗಾಳಿಬೀಡು ಸಂಪರ್ಕ ರಸ್ತೆಯ ಕುರಿತು ಮಾಹಿತಿ ಸಂಗ್ರಹಿಸಿ ಕಾನೂನು ತೊಡಕುಗಳ ನಿವಾರಿಸಿ ಅಭಿವೃದ್ಧಿಗೊಳಿಸುವ ಬಗ್ಗೆ ಭರವಸೆ ನೀಡಿದರು.

ಅವರೊಂದಿಗೆ ಕೊಡಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸತ್ಯಕುಮಾರ್ ಆಡಿಂಜ, ಭವಾನಿ ಶಂಕರ ಕಲ್ಮಡ್ಕ, ಶಶಿಧರ ಎಂ ಜೆ, ಚೇತನ್ ಕಜೆಗದ್ದೆ, ದಿನೇಶ್ ಹಾಲೆಮಜಲು, ಪ್ರದೀಪ್ ಕೆ ಎಲ್, ಸನತ್ ಮುಳುಗಾಡು, ಹರ್ಷ ಕುಮಾರ್ ದೇವಜನ, ರವಿಕುಮಾರ್ ಬಾಳುಗೊಡು, ತೇಜಕುಮಾರ್ ತಳೂರು, ವಿನೂಪ್ ಮಲ್ಲಾರ, ಸತೀಶ್ ಕೊಮ್ಮೆಮನೆ ಮತ್ತು ಕಲ್ಮಕಾರು ಕೊಲ್ಲಮೊಗರು, ಬಾಳುಗೋಡು, ಹರಿಹರ ಪಲತಡ್ಕ ಗುತ್ತಿಗಾರು ಭಾಗದ ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಉಪಸಿತರಿದ್ದರು.









