ನವದೆಹಲಿ:ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ದೇಶದ ವಾಯವ್ಯ ಭಾಗದಲ್ಲಿ ಸೆ. 15ರಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದೇಶಕ್ಕೆ ನೈರುತ್ಯ ಮಾರುತವು ಜೂನ್ 1ಕ್ಕೆ ಕೇರಳ ಪ್ರವೇಶಿಸಿ, ಜುಲೈ 8ಕ್ಕೆ ಇಡೀ ದೇಶವನ್ನು ವ್ಯಾಪಿಸಿತ್ತು. ಸೆ. 17ಕ್ಕೆ ವಾಯವ್ಯ ಭಾಗದಿಂದ
ನೈರುತ್ಯ ಮುಂಗಾರು ಹಿಂದೆ ಸರಿಯಲು ಆರಂಭಿಸಲಿದೆ. ಅ. 15ಕ್ಕೆ ಕೊನೆಗೊಳ್ಳಲಿದೆ’ ಎಂದು ಇಲಾಖೆ ತಿಳಿಸಿದೆ.
‘ಸೆ. 15ರಿಂದ ನೈರುತ್ಯ ಮುಂಗಾರು ಹಿಂದಕ್ಕೆ ಸರಿಯಲು ರಾಜಸ್ಥಾನದ ಪಶ್ಚಿಮದ ಕೆಲ ಭಾಗಗಳಲ್ಲಿನ ಪರಿಸ್ಥಿತಿ ಅನುಕೂಲಕರವಾಗಿದೆ. ಈ ವರ್ಷ ವಾಡಿಕೆಗಿಂತ ಒಂಬತ್ತು ದಿನ ಮೊದಲೇ ಮುಂಗಾರು ಇಡೀ ದೇಶವನ್ನು ಆವರಿಸಿತು. 2020ರಲ್ಲಿ ಜೂನ್ 26ರಂದೇ ಮುಂಗಾರು ಇಡೀ ದೇಶವನ್ನು ಆವರಿಸಿತ್ತು. ಅದಾದ ನಂತರ ವಾಡಿಕೆಗಿಂತ ಮೊದಲು ಮಳೆಯಾಗಿದ್ದು 2025ರಲ್ಲೇ’ ಎಂದು ಇಲಾಖೆ ಹೇಳಿದೆ.












