ಸುಳ್ಯ: ಕರ್ನಾಟಕದ ಒಳನಾಡಿನ ಇನ್ನಷ್ಟು ಪ್ರದೇಶಗಳಿಗೆ ನೈರುತ್ಯ ಮುಂಗಾರು ಮಾರುತ ವ್ಯಾಪಿಸಿದೆ. ಬಿಪರ್ಜಾಯ್ ಚಂಡಮಾರುತ ಇನ್ನಷ್ಟು ಬಲಗೊಳ್ಳುತ್ತಿದ್ದು ಗುಜರಾತ್ ಪಾಕಿಸ್ತಾನಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ದ.ಕ ದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಸರಾಸರಿ 23 ಮಿ ಮೀ ಮಳೆ ದಾಖಲಾಗಿದೆ. ಮಿತ್ತೂರಿನಲ್ಲಿ 50, ಕೈರಂಗಳದಲ್ಲಿ 45 ಮಿ ಮೀ ಮಳೆ ದಾಖಲಾಗಿದೆ ಎಂದು ಮಳೆ ದಾಖಲೆಗಾರರಾದ ಪಿ.ಜಿ.ಎಸ್.ಎನ್. ಪ್ರಸಾದ್ ಮಾಹಿತಿ ನೀಡಿದ್ದಾರೆ. ಬೆಳಿಗ್ಗಿನಿಂದ ಸುಳ್ಯದಲ್ಲಿ ಮೋಡ ಕವಿದ
ವಾತಾವರಣ ಇದ್ದು ಮಧ್ಯಾಹ್ನದ ವೇಳೆಗೆ ಮಳೆ ಆರಂಭಗೊಂಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಬಿಪರ್ಜಾಯ್ ಚಂಡಮಾರುತವು ತೀವ್ರತೆ ಪಡೆದುಕೊಂಡಿದೆ. ಆದರೆ ಕರ್ನಾಟಕದಲ್ಲಿ ಅದರ ಪ್ರಭಾವ ಅಷ್ಟಾಗಿ ಇರುವುದಿಲ್ಲ, ಬದಲಾಗಿ ಗುಜರಾತ್, ಪಾಕಿಸ್ತಾನ ಕರಾವಳಿ ಭಾಗದತ್ತ ಸಾಗಿದೆ. ಗಾಳಿ ತೀವ್ರತೆ ಹೆಚ್ಚಿಸಿಕೊಂಡಿದೆ.ಜೂನ್ 15ರವರೆಗೆ ಈ ಚಂಡಮಾರುತದ ಅಬ್ಬರ ಕಂಡು ಬರಲಿದೆ ಎಂಬ ಸೂಚನೆ ಇದೆ.