ಸುಳ್ಯ: ನಿನ್ನೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮಳೆಗಾಲ ಆರಂಭವಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಾಸರಿ 32 ಮಿ ಮೀ ನಷ್ಟು ಸಾಧಾರಣ ಮಳೆ ದಾಖಲಾಗಿದೆ. ಗುಡುಗು ಸಿಡಿಲು ಸಹಿತ ಕೆಲವು ಉತ್ತಮ ಮಳೆ ಸುರಿದಿದೆ.. ದ.ಕ ದ ಮಿತ್ತೂರಿನಲ್ಲಿ 58, ಕುಂಬ್ಳೆ- ಎಡನಾಡು 54, ಕಾಸರಗೋಡು-ಕಲ್ಲಕಟ್ಟ 51 ಮಿ.ಮೀ.ನಷ್ಟು ಗರಿಷ್ಟ ಮಳೆಯಾಗಿದೆ. ಕಾರ್ಕಳ- ಬಜಗೋಳಿಯಲ್ಲಿ ನಿನ್ನೆ ಸಂಜೆಯ ತನಕ 54 ಮಿ.ಮೀ ಮಳೆ ಸುರಿದ ಬಗ್ಗೆ
ವರದಿಯಾಗಿದೆ. ಇಂದು ಅರುಣ.. ವರುಣರ ಕಣ್ಣಾಮುಚ್ಚಾಲೆ ಆಟ ಇರುವ ಸಾಧ್ಯತೆ ಇದೆ.. ಜತೆ ಜತೆಗೆ ಮೇಘಡಂಬರವೂ ಇರಲಿದೆ ಎಂದು ಮಳೆ ದಾಖಲೆಗಾರರು ಹಾಗೂ ಹವಾಮಾನ ಅಧ್ಯಯನಕಾರರಾದ ಪಿ.ಜಿ.ಎಸ್.ಎನ್.ಪ್ರಸಾದ್ ಮಾಹಿತಿ ನೀಡಿದ್ದಾರೆ.
ಜೂನ್ 15ರವರೆಗೂ ಗಾಳಿ, ಗಡುಗು ಸಹಿತ ಭಾರಿ ಮಳೆ:
ಜೂ.11 ರಿಂದ ಜೂನ್ 15ರವರೆಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ, ಗಡುಗು ಸಹಿತ ಭಾರಿ
ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ರಾಜ್ಯಾದ್ಯಂತ ಬಿರುಗಾಳಿ ಸಹಿತ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂಬ ಮುನ್ಸೂಚನೆ ಇದೆ.