ಮಂಞಡುಕ:ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಭ್ರಮ.ಫೆಬ್ರವರಿ 16ರಂದು ಆರಂಭಗೊಂಡಿರುವ ಕಳಿಯಾಟ 23ರಂದು ಸಂಪನ್ನ ಗೊಳ್ಳಲಿದೆ.ಫೆ.22ರಂದು ಮುನ್ನಾಯರೀಶ್ವರ ದೇವರು ಭಕ್ತರನ್ನು ಹರಸಿತು. ಬೆಳಿಗ್ಗೆ 10.30ಕ್ಕೆ ಮುನ್ನಾಯರು ಹೊರಟಿತು. ಸಂಜೆ
4ಕ್ಕೆ ಶ್ರೀ ಮುನ್ನಾಯರೀಶ್ವರ ದೇವರ ಮುಡಿ ತೆಗೆದ ಬಳಿಕ
ನಂತರ ಮಲಂಕಾರಿ ದೈವ, ಪುಲ್ಲೂರ್ಣನ್ ದೈವ ಮತ್ತು ಪುಲ್ಲೂರಾಳಿ ದೇವಿ, ರಾತ್ರಿ ಆರ್ತಾಂಡನ್ ದೈವ ತೋಟ್ಟಂ, ಕ್ಷೇತ್ರ ಪಾಲಕನೀಶ್ವರ ದೈವಗಳ ತೋಟ್ಟಂ,ಶ್ರೀ ತುಳೂರ್ ವನತ್ ಭಗವತಿ ಅಮ್ಮನ ತೋಟ್ಟಂಗಳು, 101 ಭೂತಗಳ ಸೇವೆಯ ನಂತರ ಆರ್ತಾಂಡನ್ ದೈವ ಮತ್ತು ಕೋಳಿಚಾಲ್ ವೀರನ್ಮಾರ್ ನಡೆಯಿತು. ಪ್ರತಿ ದಿನ ಸಾವಿರಾರು

ಮಂದಿ ಭಕ್ತರು ಜಾತ್ರೋತ್ಸವಕ್ಕೆ ಆಗಮಿಸುತ್ತಾರೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಭಕ್ತರು ಸಂಗಮಿಸುವ ಚಂದ್ರಗಿರಿ ತಟದ ಪುಣ್ಯ ಕ್ಷೇತ್ರದಲ್ಲಿ ಎಂಟು ದಿನಗಳ ಕಾಲ ಕಳಿಯಾಟ ಸಂಭ್ರಮ ಫೆ.23ರಂದು ಸಮಾಪನಗೊಳ್ಳಲಿದೆ.8ನೇ ಕಳಿಯಾಟ ದಿನವಾದ ಫೆ.23ರಂದು ಶ್ರೀ ತುಳೂರ್ ವನತ್ತ ಭಗವತಿ ಅಮ್ಮನ ಮತ್ತು ಶ್ರೀ ಕ್ಷೇತ್ರಪಾಲಕನೀಶ್ವರ ಮತ್ತು ಬಿಲ್ಲವಸ್ಥಾನಿಗಳ ಕಲಶ ನಡೆಯಲಿದೆ. ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನದಾನವೂ ಇದೆ. ಸಾವಿರಾರು ಮಂದಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.







