ಸುಳ್ಯ:ಭಜನೆ ಒಂದು ನಾಡಿನ ಶಕ್ತಿ, ಶ್ರದ್ಧಾ ಭಕ್ತಿಯ ಭಜನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಮತ್ತು ವಿಭನೆಯಲ್ಲದೆ ನಾಡು ಒಂದಾಗುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ನಿರ್ಮಾಣ ಹಂತದಲ್ಲಿರುವ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರಕ್ಕೆ
ಸೋಮವಾರ ಭೇಟಿ ನೀಡಿ ಭಜನಾ ಮಂದಿರ ವೀಕ್ಷಣೆ ಮಾಡಿ ಆವರು ಆಶೀರ್ವಚನ ನೀಡಿದರು. ಗ್ರಾಮ ದೇವಸ್ಥಾನಕ್ಕೆ ಭೇಟಿ ನೀಡುವ ಉತ್ಸಾಹ, ಗ್ರಾಮದ ದೇವಾಲಯ, ಭಜನಾ ಮಂದಿರದ ಅಭಿವೃದ್ಧಿಗೆ ಕೊಡುಗೆ ನೀಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಮತ್ಸರ ತೊರೆಯಬೇಕು, ಇನ್ನೊಬ್ಬರ ಒಳಿತಿನಲ್ಲಿ ಮತ್ತು ಸಂತೋಷದಲ್ಲಿ ಖುಷಿ ಪಡಬೇಕು, ಇನ್ನೊಬ್ಬರ ಸಂಕಷ್ಟದಲ್ಲಿ ಸಹಾಯ ಹಸ್ತ ಚಾಚಬೇಕು ಎಂದು ಕರೆ ನೀಡಿದ ಅವರು ಮಾತು ಹಿತ ಮತ್ತು ಮಿತವಾಗಿದ್ದರೆ ಒಳಿತು ಎಂದು ಹೇಳಿದರು.
ಶ್ರೀಕೃಷ್ಣ ಜಗತ್ತಿಗೆ ಬೇಕಾದವನು, ಸೋಣಂಗೇರಿಯಲ್ಲಿ ಶ್ರೀಕೃಷ್ಣ ಭಜನಾ ಮಂದಿರ ಭಕ್ತಿ ಮತ್ತು ಶಕ್ತಿಯ ಸಾನ್ನಿಧ್ಯ ಎಂದು ಹೇಳಿದರು.
ಸೈನಿಕರ ಸಂಘದ ಮಾಜಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ಹಿತ್ಲು, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ಲೀಲಾವತಿ ಕರುಣಾಕರ ನಡುಮನೆ, ರುಕ್ಮಯ್ಯ ಗೌಡ, ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.









