ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ.ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ನೋಡೆಲ್ ಅಧಿಕಾರಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ದೀಪಿಕಾ ಮಹಿಳೆ ಹಾಗೂ ಮಕ್ಕಳ ಸಮಸ್ಯೆಗಳು ಹಾಗೂ ಮಹಿಳಾ ಜಾಗ್ರತಿ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳಾ ವಿವಿಧ ಸಾಂಕ್ರಾಮಿಕ ರೋಗಗಳ ಮಾಹಿತಿ, ಮೆದುಳು ಜ್ವರ, ಕೆಂಗಣ್ಣು, ಬಗ್ಗೆ ಹೆಣ್ಣು ಮಕ್ಕಳ
ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಮಿತಾ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಶ್ವೇತಾ ಸಂಜೀವಿನಿ ಸಂಘ. ಸಂಜೀವಿನಿ ಯೋಜನೆಯಡಿಯಲ್ಲಿ ಸಿಗುವ ಸಹಾಯಧನ ಹಾಗೂ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಗೀತಾ
ಅರೋಗ್ಯ ಅಮೃತ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ ಸದಸ್ಯರಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ ಎಸ್. ಕೆ. ಹನೀಫ್, ಶೌವಾದ್ ಗೂನಡ್ಕ, ಸುಂದರಿ ಮುಂಡಡ್ಕ,, ಸುಮತಿ ಶಕ್ತಿವೇಲು, ವಿಮಲಾ, ರಜನಿ ಶರತ್, ಅನುಪಮಾ, ಸುಶೀಲ,ಗ್ರಾಮ ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಇದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಕಾಂತಿ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ವತಿಯಿಂದ ಅರೋಗ್ಯ ತಪಾಸಣೆ, ಗ್ರಾಮ ವನ್ ಕೇಂದ್ರದ ವತಿಯಿಂದ ಅಬಾ ಕಾರ್ಡ್ ಮಾಡುವ ಕಾರ್ಯಕ್ರಮ. ಸಂಜೀವಿನಿ ವತಿಯಿಂದ ಉಪ್ಪಿನಕಾಯಿ. ಜೇನು ಮಾರಾಟ ಸ್ಟಾಲ್ ವೆವಸ್ಥೆ ಮಾಡಲಾಯಿತು. ಕಾರ್ಯಕ್ರಮದಲ್ಲಿ. ಅರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಸದಸ್ಯರು, ಮಾಜಿ ಪಂಚಾಯತ್ ಉಪಾದ್ಯಕ್ಷೆ ಆಶಾ ವಿನಯ್ ಕುಮಾರ್. ಪಂಚಾಯತ್ ಸಿಬ್ಬಂದಿಗಳು,ಸಂಜೀವಿನಿ ಒಕ್ಕೂಟದ ಸದಸ್ಯರು ಗಳು ಹಾಜರಿದ್ದರು.