ಮಂಗಳೂರು: ಮಂಗಳೂರು ನಗರದಲ್ಲಿ ಗುರುವಾರ ಸಂಜೆ ಮಳೆಯಾಗಿದೆ. ಹಗಲಿನ ವೇಳೆ ಬಿಸಿಲಿನಿಂದ ಕೂಡಿದ ವಾತಾವರಣ ಇದ್ದರೂ ನಗರದಲ್ಲಿ ಸಂಜೆಯಾಗುತ್ತಲೇ ಮಳೆ ಸುರಿದು ತಂಪೆರೆದಿದೆ.
ನಗರದ ಹಂಪನಕಟ್ಟ, ಕಂಕನಾಡಿ, ವೆಲೆನ್ಸಿಯಾ, ಪಂಪ್ವೆಲ್, ಲಾಲ್ಬಾಗ್ ಮತ್ತಿತರ ಕಡೆ ಬಿರುಸಿನ ಮಳೆಯಾಗಿದೆ.ನಗರ ಹೊರ ವಲಯದಲ್ಲೂ ಮಳೆಯಾಗಿದೆ.
ಕೇರಳದಲ್ಲಿ ಇಂದು ಮುಂಗಾರು ಪ್ರವೇಶಿಸಿದೆ. ಕೇರಳದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಸಂಜೆಯ ವೇಳೆಗೆ ಮಂಗಳೂರಿನಲ್ಲಿಯೂ ಮಳೆ ಸುರಿದು ತಂಪೆರೆದಿದೆ.