ಗೂನಡ್ಕ:ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಹಾಗೂ ಸೂರಿಲ್ಲದವರಿಗೆ ಆಸರೆ ಯೋಜನೆ ಸಂಘಟನೆಯ ಜಂಟಿ ನೇತೃತ್ವದಲ್ಲಿ ಗೂನಡ್ಕ–ದರ್ಖಾಸ್ತುವಿನಲ್ಲಿ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯರಾದ ಶರಫು ಸಾದಾತ್ ಅಶ್ರಫ್ ತಂಙಳ್ ಆದೂರು ಇವರು ಶಿಲಾನ್ಯಾಸ ನೆರವೇರಿಸಿದರು.
ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗೂನಡ್ಕ ಬದ್ರಿಯಾ
ಜುಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಷದಿ, ಸೂರಿಲ್ಲದವರಿಗೆ ಆಸರೆ ಯೋಜನೆಯ ಪ್ರಮುಖರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಕೆ.ಪಿ.ಜಾನಿ, ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಅಬೂಬಕ್ಕರ್ ಅಡ್ಕಾರ್, ನಿವೃತ್ತ ಶಿಕ್ಷಕರಾದ ಯು.ಎಸ್.ಚಿದಾನಂದ ಮಾಸ್ತರ್ ಅವರು ಈ ಮನೆ ನಿರ್ಮಾಣ ಕಾರ್ಯಕ್ಕೆ ಶುಭ ಹಾರೈಸಿದರು. ಶರಫು ಸಾದಾತ್ ಅಶ್ರಫ್ ತಂಞಲ್, ಆದೂರು ಹಾಗೂ ಹಾಜಿ ಮಹಮ್ಮದ್ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭ ಅಸ್ಸಯ್ಯದ್ ಮೆಹರಾಜ್ ತಂಙಳ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಕಲ್ಲುಗುಂಡಿ ಸಿರಾಜುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷರಾದ ಎ.ಕೆ.ಇಬ್ರಾಹಿಂ, ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಜಾಫರ್ ಸಾದಿಕ್ ಗೂನಡ್ಕ,ಉನೈಸ್ ಪೆರಾಜೆ, ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಹಾಜಿ ಅಬ್ದುಲ್ಲ ಕೊಪ್ಪದಕಜೆ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ, ಪ್ರಮುಖರಾದ ವಸಂತ ಗೌಡ ಪೆಲ್ತಡ್ಕ, ಎ.ಟಿ.ಅಶ್ರಫ್, ಉಮ್ಮರ್ ಪುತ್ರಿ, ಹಾಜಿ ಅಬ್ಬಾಸ್ ಗೂನಡ್ಕ, ಎಸ್.ಎಂ.ಅಬ್ದುಲ್ ಖಾದರ್ ದುಬೈ, ಟಿ.ಬಿ.ಅಬ್ದುಲ್ಲ, ಅಬ್ದುಲ್ ಲತೀಫ್ ಸಖಾಫಿ, ಅಬ್ದುಲ್ಲ ಮುಸ್ಲಿಯಾರ್, ಹನೀಫ್ ಝೈನಿ, ಹಬೀಬ್ ಮುಸ್ಲಿಯಾರ್ ಸುಂಟಿಕೊಪ್ಪ, ಎಂ.ಕೆ.ಮುನೀರ್, ಜಿ.ಎಂ.ಅಬ್ದುಲ್ಲ, ಹಾರಿಸ್ ಝಂ ಝಂ, ರಹೀಂ ಕೊಪ್ಪದಕಜೆ, ಸಿದ್ದೀಕ್ ಗೂನಡ್ಕ, ಅಜರುದ್ದೀನ್ ಕೊಪ್ಪದಕಜೆ, ಉನೈಸ್ ಗೂನಡ್ಕ, ಮಹಮ್ಮದ್ ಕುಂಞಿ ಕುಂಬಕ್ಕೋಡ್, ಜಾಬಿರ್ ಎಂ.ಬಿ, ಟಿ.ಎ.ಇಬ್ರಾಹಿಂ, ಡಿ.ಎಂ.ಅಬ್ದುಲ್ಲ, ಮಹಮ್ಮದ್ ಪೆಲ್ತಡ್ಕ, ಮಿರ್ಶಾದ್ ಚೇರೂರ್, ನೌಶಾದ್ ಕೂಲ್ ಮೊಬೈಲ್, ಶಾಫಿ ಗೂನಡ್ಕ, ಡಿ.ಬಿ.ಹನೀಫ್, ಶಮ್ಮಾಸ್ ಸೇರಿದಂತೆ ಮನೆಯ ಫಲಾನುಭವಿಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು.