ಸುಳ್ಯ:ಆರ್ಥಿಕವಾಗಿ ಹಿಂದುಳಿದ ಅಮರಮುಡ್ನೂರು ಗ್ರಾಮದ ಹೊನ್ನೆಕಡ್ಪು ಸೀತಮ್ಮ ಅವರ ಕುಟುಂಬಕ್ಜೆ ದಾನಿಗಳ ನೆರವಿನಿಂದ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ಫೆ.20ರಂದು ನಡೆಯಿತು. ನೂತನ ಮನೆಯನ್ನು ಹಸ್ತಾಂತರಿಸಿದ ದಾನಿ ಹಾಗೂ ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಮಾತನಾಡಿ ‘ಪ್ರತಿ ಕುಟುಂಬಕ್ಕೆ ಮನೆ ಹಾಗೂ ಶೌಚಾಲಯ ಅತೀ ಅಗತ್ಯ. ಮನೆ ಹಾಗೂ ಶೌಚಾಲಯ ಇಲ್ಲದ

ಕುಟುಂಬಗಳು ಈಗಲೂ ಇರುವುದು ಬೇಸರದ ವಿಷಯ. ಆದುದರಿಂದ ಸಮಾಜದ ಅಶಕ್ತ ಕುಟುಂಬಕ್ಕೆ ನೆರವಾಗುವುದು ಎಲ್ಲರ ಕರ್ತವ್ಯ. ಎಲ್ಲರ ಪ್ರಯತ್ನ ಮತ್ತು ದುಡಿಮೆಯಿಂದ ಈ ಮನೆ ನಿರ್ಮಾಣ ಸಾಧ್ಯವಾಗಿದೆ. ಎಷ್ಟೇ ಹಣ ಇದ್ದರೂ ಹಲವರಿಗೆ ಕೊಡುವ ಮನಸ್ಸು ಇರುವುದಿಲ್ಲ. ಆರ್ಥಿಕವಾಗಿ ಸಬಲರಾದವರು ತಮ್ಮ ಆದಾಯದ ಒಂದಿಷ್ಟು ಮೊತ್ತವನ್ನು ಸಮಾಜದ ಕಡುಬಡವರ ಏಳಿಗೆಗಾಗಿ ವ್ಯಯಿಸಬೇಕು ಜೊತೆಗೆ ಅಶಕ್ತರ ನೆರವಿಗೆ ಆರ್ಥಿಕವಾಗಿ ಶಕ್ತರಾದವರು ಶ್ರಮಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಶೋಕ್ ನೆಕ್ರಾಜೆ, ಸುಳ್ಯ ತಾಲೂಕು ಮರಾಟಿ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್, ಪತ್ರಕರ್ತ ಈಶ್ವರ ವಾರಣಾಸಿ, ಪದ್ಮನಾಭ ಬೀಡು, ಗ್ರಾ.ಪಂ.ಮಾಜಿ ಸದಸ್ಯೆದಿವ್ಯಾ ಮಡಪ್ಪಾಡಿ, ಕೊರಗಪ್ಪ ಕುರುಂಬುಡೇಲು,ಪ್ರದೀಪ್ ಉಬರಡ್ಕ, ಗೋಪಾಲಕೃಷ್ಣ ಪೊಸವಳಿಗೆ, ಕೇಶವ ಗೌಡ ಪರಿವಾರ, ಮಾಯಿಲಪ್ಪ ಸಂಕೇಶ ಉಪಸ್ಥಿತರಿದ್ದರು.
ಸೀತಮ್ಮ ಅವರ ಕುಟುಂಬದ ಸ್ಥಿತಿಗತಿಗಳನ್ನು ಕಂಡು ಈಶ್ವರ ವಾರಣಾಸಿ, ಕೊರಗಪ್ಪ ನಾಯ್ಕ ಕುರುಂಬಡೇಲು, ತೀರ್ಥರಾಮ ಮಣಿಮಜಲು, ಮಾಧವ ಗೌಡ ಕಜೆಮೂಲೆ, ಆನಂದ ಆಲೆಟ್ಟಿ, ಕೇಶವ ಪರಿವಾರ ಅವರ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಮನೆ ನಿರ್ಮಿಸಿ ನೀಡಲಾಗಿದೆ.






