ಸುಳ್ಯ:ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಜೂನ್ 16-17 ರಂದು ನಡೆಯಲಿದೆ. ಪೂರ್ವ ಸಂಪ್ರದಾಯದಂತೆ ನಡೆಯುವ ಈ ದೃಢ ಕಲಶಾಭಿಶೇಕದ ವಿಧಿ ವಿಧಾನಗಳು
ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಲಿದೆ. ಜೂ.16 ರ ಭಾನುವಾರ ಸಂಜೆ 6 ಕ್ಕೆ ದೇವತಾ ಪ್ರಾರ್ಥನೆ, ಬಳಿಕ ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತುಹೋಮ ಹಾಗೂ ವಾಸ್ತುಬಲಿ ನಡೆಯಲಿದೆ. ಜೂ. 17 ರ ಸೋಮವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹವನ ಹಾಗೂ ಕಲಶ ಪೂಜೆ ನಡೆದು ನಂತರ ಸತ್ಯನಾರಾಯಣ ಪೂಜೆ ಹಾಗೂ ಕಲಶಾಭಿಶೇಕ ನಡೆಯಲಿದೆ. ಮಧ್ಯಾಹ್ನ ಮಹಾ ಮಂಗಳಾರತಿಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದ್ದು ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕೆಂದು ದೇಗುಲದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.