ಮಂಡೆಕೋಲು:ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ದುರ್ಗಾಂಬಿಕೆಯ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಇಂದಿನಿಂದ ಅ.1ರ ತನಕ ನಡೆಯಲಿದೆ. ಆಯುಧ ಪೂಜೆ ಅ.1 ಬುಧವಾರ (ಮಹಾನವಮಿಯಂದು) ಬೆಳಿಗ್ಗೆ ಗಂಟೆ 10.30ರಿಂದ ನಡೆಯಲಿದೆ. ವಾಹನ ಪೂಜೆ ಸೆ.29 ಸೋಮವಾರದಿಂದ ಆರಂಭಗೊಂಡಿದ್ದು
ಅ.1ರ ಬುಧವಾರದ ವರೆಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರ ತನಕ ಹಾಗೂ ಸಂಜೆ 4ರಿಂದ 7ರ ತನಕ ನಡೆಯಲಿದೆ. ಅ.1ರಂದು ಬುಧವಾರ ರಾತ್ರಿ 7ರಿಂದ ದುರ್ಗಾಪೂಜೆ ನಡೆಯಲಿದೆ.ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನವರಾತ್ರಿ ಪ್ರಯುಕ್ತ ವಿಶೇಷ ಸೇವೆಗಳಾದ ಹೂವಿನ ಪೂಜೆ, ಪಣಪಾಯಸ, ಕುಂಕುಮಾರ್ಚನೆ ಮತ್ತು ದುರ್ಗಾನಾಮಾರ್ಚನೆ ನಡೆಯಲಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದುರ್ಗಾಂಬಿಕೆಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ವಿನಂತಿಸಿದ್ದಾರೆ.














