ಮಂಡೆಕೋಲು:ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಸದಾನಂದ ಮಾವಜಿ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಎರ್ಕಲ್ಪಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರ ಆಯ್ಕೆ ಮಾ.13ರಂದು ಅವಿರೋಧವಾಗಿ ನಡೆದಿತ್ತು. ಇದೀಗ ಅಧ್ಯಕ್ಷರಾಗಿ ಸದಾನಂದ ಮಾವಜಿ ಉಪಾಧ್ಯಕ್ಷರಾಗಿ ಕೃಷ್ಣ ಪ್ರಸಾದ್ ಆಯ್ಕೆಯಾಗಿದ್ದಾರೆ.










