ಮಂಡೆಕೋಲು: ಮರಿಯಾನೆಯೊಂದು ತಾಯಿ ಆನೆಯಿಂದ ಬೇರ್ಪಟ್ಟ ಘಟನೆ ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ನಡೆದಿದೆ. ಅಂದಾಜು ಎರಡು ತಿಂಗಳು ಪ್ರಾಯದ ಮರಿಯಾನೆ ಆನೆಗಳ ಹಿಂದಿನಿಂದ ಬೇರ್ಪಟ್ಟಿದೆ. ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು
ಸ್ಥಳಕ್ಕ ಆಗಮಿಸಿ ಆನೆ ಮರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಆನೆಗಳ ಹಿಂಡನ್ನು ಪತ್ತೆ ಹಚ್ಚಿ ಹಿಂಡಿನ ಜೊತೆ ಬಿಡುವ ಪ್ರಯತ್ನ ನಡೆಸಲಾಗುತಿದೆ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ. ಮಂಡೆಕೋಲು ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪು ನಿರಂತರವಾಗಿ
ಮಂಡೆಕೋಲಿನಲ್ಲಿ ಆನೆ ಹಿಂಡಿನಿಂದ ಬೇರ್ಪಟ್ಟ ಮರಿಯಾನೆ
ಸಂಚಾರ ನಡೆಸುತಿದ್ದು, ಇಂದು ಬೆಳಗ್ಗೆ ಕನ್ಯಾನ ಶಾಲೆಯ ಪಕ್ಕದಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಕಂಡು ಬಂದಿದೆ.
ಆನೆಗಳ ಹಿಂಡು ಕನ್ಯಾನ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಇದ್ದು ಆನೆ ಗುಂಪಿನೊಂದಿಗೆ ಸೇರಿಸುವ ಪ್ರಯತ್ನ ನಡೆಸಲಾಗುತಿದೆ.





