ಸುಳ್ಯ: ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿಯ ವತಿಯಿಂದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಜನವರಿ 26 ಪ್ರಜಾಪ್ರಭುತ್ವ ದಿನದಂದು ಸಂಜೆ 5 ಗಂಟೆಗೆ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪವನ್ನಿಟ್ಟು ಏಕ ಕಾಲದಲ್ಲಿ ವಿವಿಧ ಕಡೆಗಳಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುದೆ.ಇದರನ್ವಯ ದ.ಕ ಈಸ್ಟ್ ಜಿಲ್ಲಾ ಮಾನವ ಸರಪಳಿ ಕಾರ್ಯಕ್ರಮ ಜ.26 ರಂದು 5 ಗಂಟೆಗೆ ಸುಳ್ಯದ ಬೆಳ್ಳಾರೆಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ದುವಾ ನೇತೃತ್ವವನ್ನು
ಸಮಸ್ತ ದಕ್ಷಿಣ ಕನ್ನಡ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ವಹಿಸಲಿದ್ದಾರೆ. ಸಮಸ್ತ ಕೇಂದ್ರ ಸಮಿತಿ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಸ್ಕೆಎಸ್ಎಸ್ಎಫ್ ಕೇಂದ್ರ ಸಮಿತಿ ಸದಸ್ಯರಾದ ಅಬೂಬಕರ್ ರಿಯಾಝ್ ರಹ್ಮಾನಿ ಮಾನವ ಸರಪಳಿ ಸಂದೇಶ ಭಾಷಣ ಮಾಡಲಿದ್ದಾರೆ. ಅಲ್ಲದೆ ಧರ್ಮ ಗುರುಗಳು, ಸಾಮಾಜಿಕ, ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ನಡೆಯುವ ರಾಲಿಯಲ್ಲಿ ದಫ್ ಸ್ಕೌಟ್ ಫ್ಲವರ್ ಶೋ ನಡೆಯಲಿದೆ ತಂಬಿನಮಕ್ಕಿಯಿಂದ ಬೆಳ್ಳಾರೆ ಮಸೀದಿ ತನಕ ಮಾನವ ಸರಪಳಿ ನಡೆಯಲಿದೆ. ರಾಜ್ಯದ 12ಕ್ಕೂ ಹೆಚ್ಚು ಕಡೆಗಳಲ್ಲಿ ಏಕ ಕಾಲದಲ್ಲಿ ಮಾನವ ಸರಪಳಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕಡೆ ಮಾನವ ಸರಪಳಿ ನಡೆಯಲಿದ್ದು ದ.ಕ.ಜಿಲ್ಲಾ ಈಸ್ಟ್ ಕಾರ್ಯಕ್ರಮ ಬೆಳ್ಳಾರೆಯಲ್ಲಿ ಹಾಗೂ ದ.ಕ.ವೆಸ್ಟ್ ಕಾರ್ಯಕ್ರಮ ಮೂಡಬಿದ್ರೆಯಲ್ಲಿ ನಡೆಯಲಿದೆ ಎಂದು ಎಸ್ಕೆಎಸ್ಎಸ್ಎಫ್ ಮುಖಂಡರು ಹಾಗೂ ಮಾನವ ಸರಪಳಿ ಸ್ವಾಗತ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.









