ಸುಳ್ಯ:ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನೀಡುವ ಮಲೆನಾಡು ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಸುಳ್ಯ ಗಾಂಧಿನಗರದಲ್ಲಿ ನಡೆಯಿತು.ಸುಳ್ಯ ಸರಕಾರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್ ಕೆ.ಆರ್., ಪೆರುವಾಜೆ ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರುತಿ, ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಜ್ಞಾನ ಶಿಕ್ಷಕ ಇಕ್ಬಾಲ್, ರೋಟರಿ ಶಾಲಾ ಶಿಕ್ಷಕ ಹರ್ಷಿತ್ ದಾತಡ್ಕ, ಗ್ರೀನ್ ವ್ಯೂ ಪ್ರೌಢಶಾಲಾ ಶಿಕ್ಷಕಿ ಜಯಂತಿ ಅವರಿಗೆ ಮಲೆನಾಡು ಸಿರಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಮಂಜುಳಾ, ತಾ.ಪಂ.ಇ.ಒ. ರಾಜಣ್ಣ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ.,ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಬೀಜದಕಟ್ಟೆ
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಎ.ಪಿ.ಎಂ.ಸಿ. ಕಾರ್ಯದರ್ಶಿ ರವೀಂದ್ರ, ಮಾಜಿ ನಂ.ಪಂ.ಅಧ್ಯಕ್ಷ ಎಸ್.ಸಂಶುದ್ದೀನ್, ದ.ಕ. ಜಿಲ್ಲಾ ಜೇನು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮಮೋಹನ್, ಪ್ರಭಾಕರನ್ ನಾಯರ್,ಇಕ್ಬಾಲ್ ಎಲಿಮಲೆ, ದೀಪಕ್ ಕುತ್ತಮೊಟ್ಟೆ, ಮೆಟ್ರೋಪ್ಯಾಲೆಸ್ ಮಾಲಕ ಉಮ್ಮರ್ ಹಾಜಿ, ಕೇರ್ಪಳ ಲಿಂಗಪ್ಪ ಗೌಡ, ಅಶೋಕ್ ಪ್ರಭು, ಡಾ.ನಿತಿನ್ ಪ್ರಭು, ಮಧುಸೂದನ್ ಕುಂಭಕೋಡು, ಲತಾ ಮಧುಸೂದನ್, ಹರಿರಾಯ ಕಾಮತ್, ಡಾ.ಕೆ.ಜಿ.ಪುರುಷೋತ್ತಮ, ಪ್ರೊ.ಯೂಸುಫ್, ಆದಂ ಹಾಜಿ ಕಮ್ಮಾಡಿ, ಕಟ್ಟೆಕಾರ್ ಅಬ್ದುಲ್ಲಾ, ದಯಾನಂದ ಆಳ್ವ, ಜಿತೇಂದ್ರ ನಿಡ್ಯಮಲೆ, ಸುಮನಾ ಬೆಳ್ಳಾರ್ಕರ್, ಸುಪ್ರೀತ್ ಮೋಂಟಡ್ಕ, ಎ.ಪಿ.ಎಂ.ಸಿಯ. ಮುದ್ದುಕೃಷ್ಣ, ಸಿ.ಎಚ್.ಪ್ರಭಾಕರ ನಾಯರ್, ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಜಲಜಾಕ್ಷಿ , ಗಣೇಶ್ ಆಳ್ವ, ಪಿ.ಎ.ಮಹಮ್ಮದ್, ಎಸ್.ವಿ.ಪ್ರಸಾದ್, ಶ್ರೀಹರಿ ಪೈಂದೋಡಿ, ಉಮ್ಮರ್ ಕಟ್ಟೆಕಾರ್, ಕೆ.ಎಂ.ಮುಹಿಯುದ್ದೀನ್, ದಿನೇಶ್ ಕೋಲ್ಚಾರ್, ಎ.ಅಬ್ದುಲ್ಲ, ಧನಲಕ್ಷ್ಮಿ ಕುದ್ಪಾಜೆ, ಚಂದ್ರಶೇಖರ್ ಮಾಸ್ತರ್, ಅಬ್ದುಲ್ ಹಮೀದ್ ಜನತಾ, ಶಾಫಿ ಕುತ್ತಮೊಟ್ಟೆ, ಡಾ.ಎನ್.ಎ.ಜ್ಞಾನೇಶ್, ಗಾಂಧಿನಗರ ಮಸೀದಿಯ ಜಮಾಅತ್ ಅಧ್ಯಕ್ಷ ಕೆ.ಪಿ.ಎಸ್.ಮಹಮ್ಮದ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಯಾಗಿದ್ದರು.
ಹಿರಿಯ ವ್ಯಾಪಾರಸ್ಥರಾದ ಮೆಟ್ರೋಪ್ಯಾಲೆಸ್ ಹಾಜಿ ಉಮ್ಮರ್ ಹಾಗೂ ಕಟ್ಟೆಕಾರ್ ಅಬ್ದುಲ್ಲ ಅವರನ್ನು ತಹಶೀಲ್ದಾರ್ ಮತ್ತು ಇ.ಒ.ರವರು ಸನ್ಮಾನಿಸಿದರು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ಉಪಸ್ಥಿತರಿದ್ದರು. ಕೆ.ಎಂ.ಮುಸ್ತಫ ಸ್ವಾಗತಿಸಿ, ವಂದಿಸಿದರು.












