ಸುಳ್ಯ:ಅಜ್ಜಾವರ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಕಾನೂನಿನ ಬಗ್ಗೆ ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಜೊತೆ ಮಕ್ಕಳ ಸಂವಾದ ಕಾರ್ಯಕ್ರಮ ನಡೆಯಿತು. ಹದಿಹರೆಯದ ಮಕ್ಕಳು ವಾಹನ ಚಾಲನೆ ಮಾಡಬಾರದು, ಮಕ್ಕಳು ವಾಹನ ಚಾಲನೆ ಮಾಡಿದರೆ ಪೋಷಕರಿಗೆ ದಂಡ, ಹಾಗೂ ಶಿಕ್ಷೆ ಆಗುತ್ತದೆ. ಈ ಬಗ್ಗೆ ಮಕ್ಕಳಿಗೆ ಹಾಗೂ
ಪೋಷಕರಿಗೆ ಅರಿವಿರಬೇಕು ಎಂದು ತಿಳಿಸಿದರು. ಅಲ್ಲದೇ ಮಕ್ಕಳ ಹಕ್ಕುಗಳ ಸಹಾಯವಾಣಿ , ಪೊಲೀಸ್ ಸಹಾಯವಣಿ ಸೇರಿದಂತೆ ಸರಕಾರದ ವಿಷೇಷ ಯೋಜನೆಗಳ ಬಗ್ಗೆ ತಿಳಿಸಿದರು. ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು ಹಾಗೂ ಯಾವುದೇ ತರಹದ ಸಮಾಜ ವಿರೋಧಿ ಕೃತ್ಯಗಳು ಕಂಡಾಗ ನೇರವಾಗಿ ಪೋಲಿಸ್ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ವತಿಯಿಂದ ವೃತ್ತ ನಿರೀಕ್ಷಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕರಾದ ವಿದ್ಯಾಶಂಕರಿ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಶಂಕರಿ ಸ್ವಾಗತಿಸಿದರು ಶಿಕ್ಷಕಿಯಾರಾದ ಉಮಾವತಿ , ಚಂದ್ರಶೇಖರ ಭಟ್, ಅಶೋಕ ಕೆ ಎಸ್ , ಉಷಾ ಕೆ. ಎಸ್ ,ಅತಿಥಿ ಶಿಕ್ಷಕರಾದ ರಮ್ಯ ,ರಾಜೇಶ್ವರಿ, ಪ್ರಶಿಕ್ಷಣಾರ್ಥಿಗಳಾದ ಲಾವಣ್ಯ, ಹರ್ಷಿತಾ, ಹಲೀಮತ್ ಅಝ್ಮೀನಾ ಹಾಗೂ ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ಅಧ್ಯಕ್ಷೆ ಶಶ್ಮಿ ಭಟ್ ಉಪಸ್ಥಿತರಿದ್ದರು.












