ಸುಳ್ಯ:ಸುಳ್ಯ ದಸರಾ ಉತ್ಸವದಲ್ಲಿ ಈ ಬಾರಿ ಹಲವು ವಿಶೇಷಗಳು ಮೇಳೈಸಿದೆ. ಸುಳ್ಯ ಶಾರದಾಂಬಾ ದಸರಾ ಸಮೂಹ ಸಮಿತಿಗಳ ವತಿಯಿಂದ ನಡೆಯುವ ಒಂಭತ್ತು ದಿನಗಳ ದಸರಾ ಉತ್ಸವದಲ್ಲಿ ಇಂದು ಮಹಿಳಾ ದಸರಾ ಸಂಭ್ರಮವಾದರೆ, ನಾಳೆ(13) ಮಕ್ಕಳ ದಸರಾ ಕಲರವ. ನಾಳೆ ವಿಜಯದಶಮಿ ದಿನದಂದು
ನಡೆಯುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ನೂರಾರು ಮಕ್ಕಳು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಸ್ ನಿಲ್ದಾಣದ ಬಳಿಯಿಂದ ಶಾರದಾಂಬಾ ವೇದಿಕೆ ತನಕ ಮಕ್ಕಳ ಅದ್ದೂರಿ ಮೆರವಣಿಗೆ ನಡೆಯಲಿದೆ. ಬಳಿಕ ಮಕ್ಕಳ ದಸರಾ ಉದ್ಘಾಟನೆ ನಡೆಯಲಿದೆ. ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಕ್ಕಳಿಗಾಗಿ ಛದ್ಮವೇಷ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಭರತ ನಾಟ್ಯ, ಸಮೂಹ ನೃತ್ಯ, ಡ್ರಾಯಿಂಗ್, ಗೂಡುದೀಪ ಸ್ಪರ್ಧೆಗಳು, ಫನ್ ಗೇಮ್ಗಳು, ಮನರಂಜನೆಗಳು, ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸುಳ್ಯ ದಸರಾದಲ್ಲಿ ಪ್ರಥಮ ಭಾರಿಗೆ ಮಕ್ಕಳ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಶಾಲಾ ವಿದ್ಯಾರ್ಥಿಗಳು ಭಾಗವಹಿಸುವರು.