ಸುಳ್ಯ:ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರು ಆಯ್ಕೆಯಾಗಿದ್ದಾರೆ.
ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಯಿತು. ಉಪಾಧ್ಯಕ್ಷೆಯಾಗಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು, ಕಾರ್ಯದರ್ಶಿಯಾಗಿ

ಪುಷ್ಪಾ ಡಿ ಪ್ರಸಾದ್ ಕಾನತ್ತೂರು,ಪುಷ್ಪಾ ರಾಧಾಕೃಷ್ಣ, ಹೇಮಾ ವೇಣುಗೋಪಾಲ್ , ಚಂದ್ರಾಕ್ಷಿ ಜೆ. ರೈ
ಹೇಮಾ ವೇಣುಗೋಪಾಲ್ ಕಾಯರ್ತೋಡಿ, ಕೋಶಾಧಿಕಾರಿಯಾಗಿ ಚಂದ್ರಾಕ್ಷಿ ಜೆ. ರೈ ಮತ್ತು ಗೌರವಾಧ್ಯಕ್ಷೆಯಾಗಿ ಮಧುಮತಿ ಬೊಳ್ಳೂರು ಆಯ್ಕೆಯಾದರು. ಜತೆ ಕಾರ್ಯದರ್ಶಿಯಾಗಿ ಜಲಜಾಕ್ಷಿ ಮಹಾಬಲ, ನಿರ್ದೇಶಕರಾಗಿ ಉಷಾ ಎಂ. ಶಾಂತಿನಗರ, ಚಂದ್ರಾವತಿ ಬದಿಕಾನ, ಸ್ವಾತಿ ಗಿರೀಶ್, ಅನಿತಾ ಸುತ್ತುಕೋಟೆ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಹರಿಣಿ ಸದಾಶಿವ, ಮಹಾಲಕ್ಷ್ಮಿ ಕೊರಂಬಡ್ಕ, ಹರ್ಷ ಕರುಣಾಕರ, ಪ್ರಪುಲ್ಲ ಪಿ. ರೈ ಮತ್ತು ತ್ರಿವೇಣಿ ದಾಮ್ಲೆ ಆಯ್ಕೆಯಾದರು.

ಸಭೆಯಲ್ಲಿ ಶಾರದಾ ಶೇಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ಅನಿತಾ ಸುತ್ತುಕೋಟೆ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಲೆಕ್ಕಪತ್ರ ಮಂಡಿಸಿದರು. ಮಧುಮತಿ ಬೊಳ್ಳೂರು ಸ್ವಾಗತಿಸಿ, ಪುಷ್ಪಾ ಮಾಣಿಬೆಟ್ಟು ವಂದಿಸಿದರು.





