ಕಲ್ಲಪಳ್ಳಿ: ಕಲ್ಲಪಳ್ಳಿ ಪೆರುಮುಂಡದ ಆದರ್ಶ ಮಹಿಳಾ ಸಂಘ, ನೆಹರೂ ಯುವ ಕೇಂದ್ರ ಕಾಸರಗೋಡು ಇದರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಪೆರುಮುಂಡ ಆದರ್ಶ ಸಭಾ ಭವನದಲ್ಲಿ ನಡೆದ ಸಮಾರಂಭವನ್ನು ಸಂಘದ ಮಾಜಿ ಅಧ್ಯಕ್ಷೆ ಪ್ರೇಮಾವತಿ ಅಪ್ಪಯ್ಯ ಉದ್ಘಾಟಿಸಿದರು. ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಗೋಪಾಲ ಅಧ್ಯಕ್ಷತೆ ವಹಿಸಿದ್ದರು.ಸಂಘದ ಸದಸ್ಯರಾದ
ಸುಶೀಲಾ ಪಿ.ಜಿ. ಹಾಗು ಶಾಂತಾ ಎನ್.ಅವರನ್ನು ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಹೇಮಲತಾ ಮುಖ್ಯ ಅತಿಥಿಯಾಗಿದ್ದರು. ಕಲ್ಲಪಳ್ಳಿ ಕುಟುಂಬಶ್ರೀ ಎಡಿಎಸ್ ಅಧ್ಯಕ್ಷೆ ನಳಿನಾಕ್ಷಿ ದಾಮೋದರ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶೀಲಾವತಿ ಯಶೋಧರ, ಆದರ್ಶ ಕುಟುಂಬಶ್ರೀ ಅಧ್ಯಕ್ಷೆ ಸೀತಮ್ಮ ಭರತ, ಆರಾಧ್ಯ ಕುಟುಂಬಶ್ರೀ ಅಧ್ಯಕ್ಷೆ ಸುಚಿತ್ರಾ ಯತೀಶ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪೂರ್ಣಿಮಾ ರತ್ನಾಕರ ಸ್ವಾಗತಿಸಿ, ಕೋಶಾಧಿಕಾರಿ ಶ್ರೀಲತಾ ವಿಶ್ವನಾಥ ವಂದಿಸಿದರು. ಜಾಹ್ನವಿ ಪಿ.ಜೆ. ಮತ್ತು ರಕ್ಷಾ ಪಿ.ಎಂ.ಕಾರ್ಯಕ್ರಮ ನಿರೂಪಿಸಿದರುನ
ಹಿರಿಯರಾದ ಪೆರುಮುಂಡ ಪಿ.ಕೆ.ವೆಂಕಪ್ಪ ಹಾಗು ಇತರರು ಉಪಸ್ಥಿತರಿದ್ದರು.