ಸುಳ್ಯ: ಸಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಮೈತ್ರಿ ಮಹಿಳಾ ಮಂಡಲ ಇದರ ಆಶ್ರಯದಲ್ಲಿ ವಿಶ್ವಮಹಿಳಾ ದಿನಾಚರಣೆ
ಮಾರ್ಚ್ 10 ರಂದು ಜಯನಗರ ಶಾಲಾ ಮೈದಾನದಲ್ಲಿ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಸುಳ್ಯ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಶೆಟ್ಟಿ ಬೊಳ್ಳೂರು ವಹಿಸಿದ್ದರು.ವೇದಿಕೆಯಲ್ಲಿ ಜಯನಗರ ಮೈತ್ರಿ ಮಹಿಳಾ ಮಂಡಲ ಅಧ್ಯಕ್ಷೆ ಶಿಲ್ಪಾ ಸುದೇವ್, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಾರ್ಯದರ್ಶಿ ಡಾ. ಐಶ್ವರ್ಯಾ ಕೆ ಸಿ,ಜಯನಗರ ಶಾಲಾ ಮುಖ್ಯೋಪಾಧ್ಯಾಯನಿ ವೀಣಾ ಕೆ, ತಾಲೂಕು ಮಹಿಳಾ ಮಂಡಲ ಮಾಜಿ ಅಧ್ಯಕ್ಷರಾದ ಸುಮಾ ಸುಬ್ಬರಾವ್,ನ ಪಂ ಸದಸ್ಯೆ ಶಶಿಕಲಾ ನೀರ ಬಿದಿರೆ,ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷೆ ಪುಷ್ಪಾ ಡಿ, ಕಾರ್ಯದರ್ಶಿ ಅಮಿತಾ ಸುತ್ತುಕೋಟೆ, ಕೋಶಾಧಿಕಾರಿ ಚಂದ್ರಾಕ್ಷಿ ಜೆ ರೈ, ಸದಸ್ಯರಾದ ಲಲಿತಾ ಬೆಟ್ಟಂಪಾಡಿ, ಚಂದ್ರಕಲಾ ಕುತ್ತಮೊಟ್ಟೆ, ಲಲಿತಾ ಶಾಂತಿನಗರ, ಜಯನಗರ ಮೈತ್ರಿ ಮಹಿಳಾ ಮಂಡಲದ ಕಾರ್ಯದರ್ಶಿ ಸುಮತಿ ಕೆ ನಾಯಕ್, ಖಜಾಂಗಿ ಲಾವಣ್ಯ ಬಿ, ಸದಸ್ಯರಾದ ಜಯಾ ಗಿರೀಶ್, ಜೂಲಿಯಾನ ಆರ್ ಕ್ರಾಸ್ತಾ, ನಾಗವೇಣಿ ಕೆ, ಜಯಶೀಲ, ತಾರಾ ಆರ್ ವೈ, ಹೇಮಾ ಶಾಂತಪ್ಪ ಮೊದಲಾದರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ಸಾಧನೆ ಮಾಡಿದ ಹರಿಣಿ ಸದಾಶಿವ, ಸವಿತಾ ಬೆಳ್ಳಾರೆ, ಹಾಜಿರಾ ಅಬ್ದುಲ್ಲ, ಲತಾ ಚೆನ್ನಕೇಶವ ಮರ್ಕಂಜ, ರಾಜೇಶ್ವರಿ ಎಂ, ಸಿಸ್ಟರ್ ಬಿನೋಮಾ, ಶಶಿಕಲಾ ನೀರಬಿದಿರೆ, ಸುಮಾ ಸುಬ್ಬರಾವ್ ಇವರನ್ನು ಸನ್ಮಾನಿಸಲಾಯಿತು.
ಜಯನಗರ ನಿವಾಸಿಗಳಾದ ಐವರು ಮಹಿಳೆಯರ ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೀತಾ ರಮೇಶ್, ಹಿರಿಯರಾದ ಕೊರಪ್ಪೋಳು ನಾರಾಜೆ,ಆಟೋ ಚಾಲಕಿ ಗೀತಾ ದಯಾನಂದ, ತಾರಾ ಆರ್ ರೈ ರವರಿಗೆ ನಮ್ಮೂರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕಿನ ಮಹಿಳಾ ಮಂಡಲಗಳ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಜಾನಪದ ನೃತ್ಯ, ಜಾನಪದ ಸಮೂಹ ಗಾನ, ಕಿರು ಪ್ರಹಸನ ಮುಂತಾದ ಕಾರ್ಯಕ್ರಮಗಳು ನಡೆದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.ಲೇಖಕಿ ಚಂದ್ರಾವತಿ ಬಡ್ಡಡ್ಕ, ಕಲಾವಿದೆ ಮಂಜುಶ್ರೀ ರಾಘವ ಕಾರ್ಯಕ್ರಮ ನಿರೂಪಿಸಿದರು.
ಮಧುಮತಿ ಶೆಟ್ಟಿ ಬೊಳ್ಳೂರು ಸ್ವಾಗತಿಸಿದರು.









