ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ಅಂಗವಾಗಿ ಹಮ್ಮೊಕೊಳ್ಳಲಾಗಿರುವ ಮಹಿಳಾ ದಸರಾ ವೈವಿಧ್ಯಮಯವಾಗಿ ಮೂಡಿ ಬಂದಿತು.ಮಹಿಳಾ ದಸರಾದ ಅಂಗವಾಗಿ ಮಹಿಳೆಯರಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ವಿವಿಧ
ಸ್ಪರ್ಧಾ ಕಾರ್ಯಕ್ರಮಗಳು, ಆಟೋಟಗಳು ನಡೆಯಿತು. ಇಂದು ಪೂರ್ತಿಯಾಗಿ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ. ಗುಂಪು ಆಟಗಳು, ರಂಗೋಲಿ ಸ್ಪರ್ಧೆ, ಹೂವಿನ ಹಾರ ಕಟ್ಟುವ ಸ್ಪರ್ಧೆ, ಜಾನಪದ ಗೀತೆ, ಜಾನಪದ ನೃತ್ಯ, ಭಗವದ್ಗೀತೆ ಪಠಣ, ಸೀರೆಯ ನಿಖರ ಬೆಲೆ ಹೇಳುವ ಸ್ಪರ್ಧೆ, ಮೋಜಿನ ಆಟಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಜೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಭಜನಾ ಕಾರ್ಯ ಕ್ರಮ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಇವರಿಂದ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯ ಕಲಾವಿದರಿಂದ ನೃತ್ಯ ಸಂಗಮ ಮತ್ತು ನೃತ್ಯ ರೂಪಕ – ಶ್ರೀನಿವಾಸ ಕಲ್ಯಾಣ ನಡೆಯುವುದು.
ಮಹಿಳಾ ದಸರಾ ಉದ್ಘಾಟನೆ:
ಹಿರಿಯರಾದ ಶಾಲಿನಿ ಕೆ.ಎನ್. ಅವರು ಮಹಿಳಾ ದಸರಾ ಉದ್ಘಾಟಿಸಿದರು. ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ, ಮಹಿಳಾ ದಸರಾ ಸಮಿತಿಯ ಗೌರವಾಧ್ಯಕ್ಷೆ ಯಶೋಧಾ ರಾಮಚಂದ್ರ, ಅಧ್ಯಕ್ಷೆ ಲತಾ ಮಧುಸೂಧನ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಐಶ್ವರ್ಯ ಕೆ.ಸಿ, ಉಷಾ ಕಸ್ತೂರಿ ಶಂಕರ್, ಶಶಿಕಲಾ ಪ್ರಭಾಕರನ್ ನಾಯರ್, ಶಾರದಾಮಣಿ ಶಿವದಾಸ ರೈ, ಲೀಲಾವತಿ ಕಲ್ಲಾಜೆ, ಶ್ರೀದೇವಿ ನಾಗರಾಜ ಭಟ್, ಚಂದ್ರಾಕ್ಷಿ ಜೆ ರೈ, ಶಿಲ್ಪಾ ಸುದೇವ್, ಜಯಾ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ದಸರಾ ಮಹಿಳಾ ಸಮಿತಿಯ ಅಧ್ಯಕ್ಷೆ ಲತಾ ಮದುಸೂಧನ್ ಸ್ವಾಗತಿಸಿದರು, ಕಾರ್ಯದರ್ಶಿ ಶ್ವೇತಾ ಪ್ರಶಾಂತ್ ವಂದಿಸಿದರು. ನಳಿನಾಕ್ಷಿ ಕಲ್ಮಡ್ಕ, ಸಿಂಚನ ಹಾಗೂ ಅನನ್ಯ ಕಾಟೂರು ಕಾರ್ಯಕ್ರಮ ನಿರೂಪಿಸಿದರು.





