ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ದಸರಾ ಉತ್ಸವದ ಅಂಗವಾಗಿ ಹಮ್ಮೊಕೊಳ್ಳಲಾಗಿರುವ ಮಹಿಳಾ ದಸರಾ ಜನ ಮನ ಸೆಳೆಯುತಿದೆ. ಮಹಿಳಾ ದಸರಾದ ಅಂಗವಾಗಿ ಮಹಿಳೆಯರಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಮಹಿಳೆಯರಿಂದ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳು, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಹಿಳೆಯರ ವಿವಿಧ
ಸ್ಪರ್ಧಾ ಕಾರ್ಯಕ್ರಮಗಳು ನಡೆಯುತ್ತಿದೆ. ಸುಮಾರು 20ಕ್ಕೂ ಹೆಚ್ಚು ವೈವಿಧ್ಯಮಯ ಸ್ಟಾಲ್ಗಳಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಪುಸ್ತಕಗಳ ಮಾರಾಟ ಮಳಿಗೆ, ಜೇನು, ಆರ್ಗಾನಿಕ್ ಸಾಬೂನುಗಳು, ಹೂವಿನ ಗಿಡಗಳು, ಸ್ಥಳದಲ್ಲಿಯೇ ತಯಾರಿಸಿ ನೀಡುವ ಬಿಸಿ ಬಿಸಿ ತಿಂಡಿ, ತಿನಿಸುಗಳು, ಆಯುರ್ವೇದ ಔಷಧಿಗಳು ಒಳಗೊಂಡ
ಪೌಷ್ಠಿಕ ಪಾನೀಯ, ಜ್ಯೂಸ್ಗಳು, ಡ್ರೈಪ್ರೂಟ್ಸ್, ಬಟ್ಟೆ, ಮಕ್ಕಳ ಆಟಿಕೆ ಮಳಿಗೆ, ಸ್ವ ಉದ್ಯೋಗದಲ್ಲಿ ತಯಾರಿಸಿದ ವಿವಿಧ ಗೃಹೋಪಯೋಗಿ ವಸ್ತುಗಳು, ಕತ್ತಿಗಳು, ಲವ್ ಬರ್ಡ್ಸ್, ಪಾರಿವಾರಗಳ ಕಲರವ ಹೀಗೆ ವೈವಿಧ್ಯಮ ಸ್ಟಾಲ್ಗಳು ಗಮನ ಸೆಳೆದಿದೆ.ಹಳ್ಳಿಯ ಪಾರಂಪರಿಕ ಕೃಷಿ ಉತ್ಪನ್ನಗಳ ಮಳಿಗೆ ವಿಶೇಷ ಗಮನ ಸೆಳೆದಿದೆ. ಹಳ್ಳಿಗಳಲ್ಲಿ, ಮನೆಗಳಲ್ಲಿ ಬೆಳೆಯುವ ಕೇನೆ, ಮಾವು ಶುಂಠಿ, ತಿಮರೆ, ಮರ ಕೆಸ, ಉಮಿ ಕೆಸ, ಹರಿಸಿನ ಎಲೆ, ಬಡ್ಡು ಹುಳಿ, ಗಾಂಧಾರಿ ಮೆಣಸು, ಹಿಡಿಸೂಡಿ, ವೀಳ್ಯದೆಲೆ ಹೀಗೆ ಅಜ್ಜಾವರ ಚೈತ್ರ ಯುವತಿ ಮಂಡಲದ ಈ ಸ್ಟಾಲ್ನಲ್ಲಿ ಹಲವು
ಗ್ರಾಮೀಣ ಸೊಗಡಿನ ವಸ್ತುಗಳು ಮೇಳೈಸಿದೆ. ಸ್ಟಾಲ್ಗಳ ಜೊತೆಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು, ಆಟೋಟಗಳು ನಡೆಯುತ್ತಿವೆ. ಇಂದು ಪೂರ್ತಿಯಾಗಿ ಮಹಿಳೆಯರಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸಂಜೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತ ನಾಟ್ಯ ನೃತ್ಯ ವೈಭವ ಅಸ್ಟಲಕ್ಷ್ಮೀ, ನಡೆಯಲಿದೆ. ಬಳಿಕ ಮಹಿಳಾ ಯಕ್ಷಗಾನ ತಂಡದಿಂದ ಶ್ರೀದೇವಿ ಮಹಿಷಮರ್ದಿನಿ ಯಕ್ಷಗಾನ ಬಯಲಾಟ ನಡೆಯಲಿದೆ.
ಮಹಿಳಾ ದಸರಾ ಉದ್ಘಾಟನೆ:
ಹಿರಿಯರಾದ ನಳಿನಿ ಕೃಷ್ಣ ಕಾಮತ್ ಮಹಿಳಾ ದಸರಾ ಉದ್ಘಾಟಿಸಿದರು. ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ, ಶಾರದಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಹಾಗೂ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕಾರ್ಯದರ್ಶಿ ಶ್ರೀದೇವಿ ನಾಗರಾಜ ಭಟ್ , ಗೌರವ ಸಲಹೆಗಾರರಾದ ಯಶೋಧಾ ರಾಮಚಂದ್ರ, ಲತಾ ಮಧುಸೂಧನ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.