ಸುಳ್ಯ:ಸುಳ್ಯ ನಗರ ಮಹಾಯೋಜನೆ ಸರಳೀಕರಣ ಗೊಳಿಸಿ ಅನುಮೋದನೆ ನೀಡುವಂತೆ ಸರಕಾರದ ನಗರಾಭಿವೃದ್ದಿ ಮತ್ತು ನಗರ ಯೋಜನಾ ಇಲಾಖೆ ಸಚಿವರಾದ ಭೈರತಿ. ಎಸ್. ಸುರೇಶ್ ಅವರಿಗೆ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ. ಎಂ. ಮುಸ್ತಫ ಮನವಿ ನೀಡಿದರು.ಜಿಲ್ಲೆಯ ಎಲ್ಲಾ ನಗರ ಯೋಜನಾ ಪ್ರಾಧಿಕಾರಗಳ ಪ್ರಗತಿ ಮತ್ತು ಸಮಸೈಗಳ ಪರಿಶೀಲನಾ ಸಭೆ ನಡೆಸಲು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡಿ ಸುಳ್ಯ ನಗರ ಯೋಜನಾ
.ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಅಂಗೀಕಾರಗೊಳ್ಳುವರೆಗೆ ನಗರ ಪಂಚಾಯತ್ನಲ್ಲೇ ಪರವಾನಿಗೆ, ಖಾತೆ ನೀಡುವಂತೆ,
ರಸ್ತೆ ,ನಿವೇಶನ, ಮೊದಲಾದ ವಿಷಯಗಳಲ್ಲಿ ಸರಳೀಕರಣ ಗೊಳಿಸಿ ಪ್ರಸ್ತಾವನೆ ಅಂಗೀಕರಿಸುವಂತೆ ಮನವಿ ಯಲ್ಲಿ ಆಗ್ರಹಿಸಲಾಗಿದೆ.2013 ಸುಳ್ಯದಲ್ಲಿ ಯೋಜನಾ ಪ್ರಾಧಿಕಾರದ ನಿಯಮ ಜಾರಿಗೆ ಬರುವುದಕ್ಕಿಂತ ಮುಂಚೆಯೇ ಭೂ ಪರಿವರ್ತನೆ ಗೊಂಡು ನಿರ್ಮಾಣಗೊಂಡ ಕಟ್ಟಡ ಮತ್ತು ನಿವೇಶನಗಳಿಗೆ ಪ್ರಾಧಿಕಾರದ ಅನುಮೋದನೆಗೆ 2013 ಕಟ್ ಆಫ್ ಡೇಟ್ ನಿಗದಿಪಡಿಸಿ ಆದೇಶ ಹೊರಡಸುವುದು ಸೇರಿದಂತೆ ಅನೇಕ ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುರುವ ಸಚಿವರು ಸುಳ್ಯ ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ಹಲವು ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಈ ಸಮಸ್ಯೆಗಳಿದ್ದು ಈ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ಮುಸ್ತಫ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು







