ಸುಳ್ಯ:ಐವತ್ತೊಕ್ಲು ಗ್ರಾಮದ ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.5ರಂದು ‘ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ‘ಶ್ರೀ ಮಹಾವಿಷ್ಣು ಮಹಾಯಾಗ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಯಾಗ ಸಮಿತಿಯ
ಅಧ್ಯಕ್ಷ ಡಾ.ರವಿ ಕಕ್ಕೆಪದವು ಹಾಗೂ ಸಂಚಾಲಕ ವಿಜೆ ವಿಖ್ಯಾತ್ ಸುಳ್ಯ ಯಾಗದ ಕುರಿತು ವಿವರ ನೀಡಿದರು.ಋಷಿ ಪರಂಪರೆಯ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹವಾಮಾನ ವೈಪರೀತ್ಯ, ಪ್ರಳಯ ಭೂಕಂಪದಂತಹಾ ಪ್ರಕೃತಿ ವಿಕೋಪ ನಡೆಯದಂತೆ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿ ಪ್ರಥಮ ಬಾರಿಗೆ ಶ್ರೀ ಮಹಾವಿಷ್ಣು ಯಾಗ ಹಮ್ಮಿಕೊಳ್ಳಲಾಗಿದೆ.

2026ನೇ ಎಪ್ರಿಲ್ ತಿಂಗಳಲ್ಲಿ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಯಾಗ ನಡೆಯಲಿದೆ.ಕೋಡಿಮಠ ಮಹಾ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ
ಶ್ರೀ ಮಹಾವಿಷ್ಣು ಮಹಾಯಾಗ ನಡೆಯಲಿದೆ ಎಂದು ವಿವರಿಸಿದರು.
ಯಾಗದ ಯಶಸ್ವಿಗಾಗಿ ಅಕ್ಷಯ್ ಕೆ.ಸಿ. ಕುರುಂಜಿ ಅವರ ಗೌರವಾಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ರಕಾಶ್ ಕಂಬಳ, ಜೊತೆ ಕಾರ್ಯದರ್ಶಿ ನಳಿನಾಕ್ಷಿ ಎಂ.ಪಂಜ, ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾದ ದಾಮೋದರ ಗೌಡ, ಕುಸುಮಾ ಮುತ್ಲಾಜೆ ಉಪಸ್ಥಿತರಿದ್ದರು.





