ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಮತ್ತು ಕೆಲ ರಾಜ್ಯದ ವಿಧಾನಸಭೆ ಉಪ ಚುನಾವಣೆ ಇಂದು ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ.
ಮಹಾರಾಷ್ಟ್ರ ವಿಧಾನಸಭೆ ಒಟ್ಟು ಕ್ಷೇತ್ರ–288 ಬಹುಮತಕ್ಕೆ 145
ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೃತೃತ್ವದ ಮಹಾಯುತಿ ಒಕ್ಕೂಟ ಮೇಲುಗೈ ಸಾಧಿಸಲಿದೆ ಎಂದು
ಹಲವು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿವೆ.
ಪಿ–ಮಾರ್ಕ್ ಸಂಸ್ಥೆ ಮಹಾಯುತಿ 137 ರಿಂದ 158 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಉದ್ಧವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಘಾಡಿಯು 126 ರಿಂದ 146 ಸ್ಥಾನಗಳನ್ನು ಹಾಗೂ 2ರಿಂದ 8 ಸ್ಥಾನಗಳನ್ನು ಇತರರು ಗೆಲ್ಲಬಹುದು ಎಂದು ಹೇಳಿದೆ.
ಮ್ಯಾಟ್ರೀಜ್ ಎನ್ನುವ ಸಂಸ್ಥೆ ಮಹಾಯುತಿ 150 ರಿಂದ 170 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಉದ್ಧವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಘಾಡಿಯು 110 ರಿಂದ 130 ಸ್ಥಾನಗಳನ್ನು ಹಾಗೂ 8ರಿಂದ 10 ಸ್ಥಾನಗಳನ್ನು ಇತರರು ಗೆಲ್ಲಬಹುದು ಎಂದು ಹೇಳಿದೆ.
ಪೀಪಲ್ ಪಲ್ಸ್ ಎನ್ನುವ ಸಂಸ್ಥೆ ಮಹಾಯುತಿ 175 ರಿಂದ 190 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಉದ್ಧವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಘಾಡಿಯು 85 ರಿಂದ 112 ಸ್ಥಾನಗಳನ್ನು ಹಾಗೂ 7ರಿಂದ 12 ಸ್ಥಾನಗಳನ್ನು ಇತರರು ಗೆಲ್ಲಬಹುದು ಎಂದು ಹೇಳಿದೆ.
ಚಾಣಕ್ಯ ಸ್ಟಾಟರ್ಜಿ ಎನ್ನುವ ಸಂಸ್ಥೆ ಮಹಾಯುತಿ 152 ರಿಂದ 160 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಉದ್ಧವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಘಾಡಿಯು 130 ರಿಂದ 138 ಸ್ಥಾನಗಳನ್ನು ಹಾಗೂ 6ರಿಂದ 8 ಸ್ಥಾನಗಳನ್ನು ಇತರರು ಗೆಲ್ಲಬಹುದು ಎಂದು ಹೇಳಿದೆ.
ಪೋಲ್ ಡೈರಿ ಎನ್ನುವ ಸಂಸ್ಥೆ ಮಹಾಯುತಿ 122 ರಿಂದ 186 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ. ಉದ್ಧವ್ ಠಾಕ್ರೆ ನಾಯಕತ್ವದ ಮಹಾ ವಿಕಾಸ್ ಅಘಾಡಿಯು 69 ರಿಂದ 121 ಸ್ಥಾನಗಳನ್ನು ಹಾಗೂ 12ರಿಂದ 29 ಸ್ಥಾನಗಳನ್ನು ಇತರರು ಗೆಲ್ಲಬಹುದು ಎಂದು ಹೇಳಿದೆ.
ಜಾರ್ಖಂಡ್ ವಿಧಾನಸಭೆ:
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಈ ಸಾರಿ ಬಿಜೆಪಿ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಹಲವು ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟ ಅಧಿಕಾರದಚ ಚುಕ್ಕಾಣಿ ಹಿಡಿಯಬಹುದು ಎಂದು ಹೇಳಿವೆ
ಒಟ್ಟು ಕ್ಷೇತ್ರ–81 ಬಹುಮತಕ್ಕೆ 42