ಮುಕ್ಕೂರು : ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮಾ.27 ರಿಂದ ಎ.7 ರ ತನಕ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮುಕ್ಕೂರು ಭಾಗದ ಭಕ್ತವೃಂದದ ವತಿಯಿಂದ ಹಸಿರು ಹೊರೆಕಾಣಿಕೆಯನ್ನು ಮಾ.25 ರಂದು ರಾತ್ರಿ ಸಮರ್ಪಿಸಲಾಯಿತು.ಮೂವತ್ತೈದಕ್ಕೂ ಅಧಿಕ ಮನೆಯವರು ಸಮರ್ಪಿಸಿದ
ಹಸಿರು ಹೊರೆ ಕಾಣಿಕೆಯನ್ನು ಮುಕ್ಕೂರಿನಿಂದ ವಾಹನ ಮೂಲಕ ಮಧೂರು ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು. ಪ್ರಗತಿಪರ ಕೃಷಿಕ ಸಂಜೀವ ಗೌಡ ಬೈಲಂಗಡಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.ಮಧೂರು ಕ್ಷೇತ್ರದಲ್ಲಿ ಹೊರೆಕಾಣಿಕೆಯನ್ನು ಸಮರ್ಪಿಸಿದ ಸಂದರ್ಭದಲ್ಲಿ ಅರ್ಚಕರು ಗರ್ಭಗುಡಿಯ ಮುಂಭಾಗ ಸುವಸ್ತುಗಳನ್ನು ಇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅದಾದ ಬಳಿಕ ಉಗ್ರಾಣಕ್ಕೆ ಹಸುರು ಹೊರೆಕಾಣಿಕೆಯನ್ನು ಕೊಂಡೊಯ್ಯಲಾಯಿತು.
ಈ ಸಂದರ್ಭದಲ್ಲಿ ಗುಡ್ಡಪ್ಪ ಗೌಡ ಅಡ್ಯತಕಂಡ, ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ವಿಕಾಸ್ ರೈ ಕುಂಜಾಡಿ, ರವಿ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ಜಗದೀಶ್ ಬೊಮ್ಮಂತಗುಂಡಿ, ಕಿಶನ್ ಅಡ್ಯತಕಂಡ, ಚೇತನ್ ಬೊಣ್ಯಕುಕ್ಕು, ತೇಜಸ್ವಿತ್ ಅಡ್ಯತಕಂಡ, ಪವನ್ ಅಡ್ಯತಕಂಡ, ಪ್ರದೀಪ್ ಬೈಲಂಗಡಿ, ಮಹೇಶ್ ಪೆರ್ಲಂಪಾಡಿ, ಭೂಮಿಕ್ ಬೈಲಂಗಡಿ ಉಪಸ್ಥಿತರಿದ್ದರು.