ನವದೆಹಲಿ: ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು. ಅವರಿಗೆ 83 ವರ್ಷವಾಗಿತ್ತು.
ಅಲ್ಪಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.ಮಾಧವ ಗಾಡ್ಗೀಳ್ ನಿಧನರಾದ ವಿವರವನ್ನು ಅವರ ಮಗ ಸಿದ್ಧಾರ್ಥ ಗಾಡ್ಗೀಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಶ್ಚಿಮ ಘಟ್ಟ ಹಾಗೂ
ಪರಿಸರ ಸಂರಕ್ಷಣೆ ಸಂಬಂಧಿತ ಕೆಲಸಗಳಿಂದ ಅವರು ಹೆಸರುವಾಸಿಯಾಗಿದ್ದರು.
ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು. 2011 ರಲ್ಲಿ, ಅವರು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಶಿಫಾರಸು ಮಾಡಿದರು.
ದೇಶದಲ್ಲಿ ಪರಿಸರ ಕಾಳಜಿಯ ಚಟುವಟಿಕೆ ಮತ್ತು ಪರಿಸರ ಸಂರಕ್ಷಣೆಗೆ ಆಂದೋಲನ ಸ್ವರೂಪ ನೀಡಿದ್ದ ಅವರು
ಪರಿಸರ ಸಂರಕ್ಷಣಾ ಕಾಳಜಿಯ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದರು.












